ETV Bharat / city

ಯೋಗೇಶ್ ಗೌಡ ಹತ್ಯೆ ಪ್ರಕರಣ: ಅಭಿಯೋಜಕಿ ಸುಮಿತ್ರಾ ವರ್ಗಾವಣೆ ಜಾಡು ಹಿಡಿದ ಸಿಬಿಐ - CBI investigate Yogesh Gowda Murder case

ಯೋಗೇಶ್ ಗೌಡ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರೆದಿದ್ದು, ಸರಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ಸಿಬಿಐ ವಿಚಾರಣೆ ಮುಗಿಸಿಕೊಂಡು ಧಾರವಾಡ ಉಪನಗರ ಠಾಣೆಯಿಂದ ಹೊರಬಂದಿದ್ದಾರೆ.

ವಿಚಾರಣೆಗೆ ಹಾಜರಾದ  ಸುಮಿತ್ರಾ ಅಂಚಟಗೇರಿಗೆ
ವಿಚಾರಣೆಗೆ ಹಾಜರಾದ ಸುಮಿತ್ರಾ ಅಂಚಟಗೇರಿಗೆ
author img

By

Published : Jan 21, 2021, 7:39 PM IST

Updated : Jan 21, 2021, 8:00 PM IST

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸರ್ಕಾರಿ ಅಭಿಯೋಜಕರ ವರ್ಗಾವಣೆಯ ಜಾಡು ಹಿಡಿದು ಸಿಬಿಐ ತನಿಖೆ ಆರಂಭಿಸಿದೆ.

ವಿಚಾರಣೆಗೆ ಹಾಜರಾದ ಸುಮಿತ್ರಾ ಅಂಚಟಗೇರಿಗೆ

ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿಗೆ ಸಿಬಿಐ ಬುಲಾವ್‌ ನೀಡಿದ್ದು, ವಿಚಾರಣೆಗೆಂದು ಧಾರವಾಡ ಉಪನಗರ ಠಾಣೆಗೆ ಆಗಮಿಸಿದ್ದರು. ಇದೀಗ ವಿಚಾರಣೆ ಅಂತ್ಯಗೊಂಡಿದ್ದು ಉಪನಗರ ಠಾಣೆಯಿಂದ ಹೊರ ಬಂದಿದ್ದಾರೆ.

ಪ್ರಕರಣದಲ್ಲಿ ಅಭಿಯೋಜಕಿ ಸುಮಿತ್ರಾ ಅವರು ಅಸಹಕಾರ ತೋರಿದ ಆರೋಪದ ಮೇರೆಗೆ ಸಿಬಿಐ ಇವರನ್ನು ವಿಚಾರಣೆಗೊಳಪಡಿಸಿದೆ ಎನ್ನಲಾಗಿದೆ. ಜೊತೆಗೆ ಸುಮಿತ್ರಾರೊಂದಿಗೆ ಅಣ್ಣ ವಿಶ್ವನಾಥ ಯಂಡಿಗೇರಿ ಅವರನ್ನು ಸಹ ಸಿಬಿಐ ವಿಚಾರಣೆ‌ ನಡೆಸಿದ್ದು, ಅಣ್ಣ-ತಂಗಿ ಇಬ್ಬರು ವಿಚಾರಣೆ ಮುಗಿಸಿಕೊಂಡು ಹೊರಬಂದಿದ್ದಾರೆ. ಜೊತೆಗೆ ವಿಶ್ವನಾಥ ಯಂಡಿಗೇರಿಯವರು ವಿನಯ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಗೃಹ ಇಲಾಖೆಗೆ ಪತ್ರ ಬರೆದ ಗುರುನಾಥ ಗೌಡ
ಗೃಹ ಇಲಾಖೆಗೆ ಪತ್ರ ಬರೆದ ಗುರುನಾಥ ಗೌಡ

ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿಯವರನ್ನು ವರ್ಗಾವಣೆ ಮಾಡಿಸಿದ ಆರೋಪ ವಿನಯ ಕುಲಕರ್ಣಿ ಮೇಲಿದೆ. ಜೊತೆಗೆ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ತನಿಖೆಗೆ ಅಸಹಕಾರ ತೋರಿದ ಆರೋಪ ಈ ಸುಮಿತ್ರಾ ಅವರ ಮೇಲಿದ್ದು, ಈ ಕುರಿತಾಗಿ ಗುರುನಾಥ ಗೌಡ ಗೃಹ ಇಲಾಖೆಗೆ ಪತ್ರ ಬರೆದಿದ್ದರು.

ಇನ್ನು ಇಂದು ಮಧ್ಯಾಹ್ನ ಪೊಲೀಸ್ ವಿಚಾರಣೆಗೆ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹಾಗೂ ವಿನಯ್ ಆಪ್ತ ಸಹಾಯಕ ಪ್ರಶಾಂತ ಕೇಕರೆ ಆಗಮಿಸಿದ್ದು, ವಿಚಾರಣೆ ಮುಗಿಸಿಕೊಂಡು ವಾಪಸ್ಸಾಗಿದ್ದಾರೆ.

Last Updated : Jan 21, 2021, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.