ETV Bharat / city

'ಭಾರತ ಬಂದ್' ಕರೆಗೆ ರಾಜ್ಯದ ವಿವಿಧ ಸಂಘಟನೆಗಳ ಬೆಂಬಲ: ಸ್ತಬ್ಧವಾಗುತ್ತಾ ಕರುನಾಡು?

ಕೇಂದ್ರ ಸರ್ಕಾರದ ಕೃಷಿ ಮಸೂದೆ ಜಾರಿ ವಿರೋಧಿಸಿ ನಾವು ನಾಳೆ ನಡೆಯಲಿರುವ ಭಾರತ್​ ಬಂದ್​​ಗೆ ರಾಜ್ಯದ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ ಎಂದು ಸಂಘಟನೆಗಳು ತಿಳಿಸಿವೆ.

various-organizations-across-the-state-support-the-india-band
ಭಾರತ ಬಂದ್
author img

By

Published : Dec 7, 2020, 5:03 PM IST

ಬೆಳಗಾವಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ನಾಳೆ ಭಾರತ್​ ಬಂದ್ ಬೆಂಬಲಿಸುವುದಾಗಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಲ್ಪ ಕಾಲಾವಕಾಶ ಸಿಕ್ಕಿದ್ರೆ ಇಡೀ ಉತ್ತರ ಕರ್ನಾಟಕವನ್ನು ಬಂದ್ ಮಾಡುತ್ತಿದ್ದೆವು. ಇದು ಕೇವಲ ರೈತರ ವಿಷಯ ಅಲ್ಲಾ, ಅನ್ನ ತಿನ್ನುವ ಎಲ್ಲರ ವಿಷಯವಾಗಿದೆ. ರೈತ ವಿರೋಧಿ, ಜನ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ನಾಳೆ ಬಂದ್ ಮೂಲಕ ವೈಚಾರಿಕ ಸಂಘರ್ಷಕ್ಕೆ ನಾವು ಇಳಿತಿದೀವಿ ಎಂದರು.

ಎಂ ಎಸ್ ಪಿ ಮುಂದುವರಿಯುತ್ತೆ ಅಂತ ಘೋಷಣೆ ಮಾಡ್ತಾರೆ. ದೆಹಲಿಯಲ್ಲಿದ್ದು ಘೋಷಣೆ ಮಾಡಿದ್ರೆ ರೈತರಿಗೆ ಬೆಂಬಲ ಬೆಲೆ ಸಿಗುತ್ತಾ? ಯಾರು ಖರೀದಿ ಮಾಡ್ತಾರೆ ಅದನ್ನ ಹೇಳ್ರಿ ಎಂದು ಕೇಂದ್ರ ಸರ್ಕಾರಕ್ಕೆ ಬಾಬಾಗೌಡ ಪಾಟೀಲ್​ ಸವಾಲು ಹಾಕಿದರು.

ಈ ಕೃಷಿ ಮಸೂದೆಗಳಿಂದ ರೈತರು ಬದುಕೋದೇ ಇಲ್ಲ. ಬ್ರಿಟಿಷರ ಗುಲಾಮರಾಗಿದ್ದಕ್ಕಿಂತಲೂ ಕೀಳು ದರ್ಜೆ ಗುಲಾಮರಾಗಿ ಬದುಕೋ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿ ಬದುಕುವ ಸ್ಥಿತಿ ಬರುತ್ತೆ. ಆ ಕಾರಣಕ್ಕೆ ಇದನ್ನು ಸಹಿಸಲು ಆಗಲ್ಲ, ಚಳವಳಿ ನಮಗೆ ಅನಿವಾರ್ಯ ಮಾರ್ಗವಾಗಿದೆ ಎಂದರು.

ರೈತರ 'ಭಾರತ ಬಂದ್' ಕರೆಗೆ ರಾಜ್ಯದ ವಿವಿಧ ಸಂಘಟನೆಗಳ ಬೆಂಬಲ

ಭಾರತ್​ ಬಂದ್​ಗೆ ಧಾರವಾಡ ಅಖಿಲ ಭಾರತ ರೈತ ಸಂಘರ್ಷ ಸಮಿತಿ ಬೆಂಬಲ..

ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಧರಣಿ ಬೆಂಬಲಿಸಿ ನಾಳೆ ಕರೆ ನೀಡಿದ 'ಭಾರತ ಬಂದ್'ಗೆ ಅಖಿಲ ಭಾರತ ರೈತ ಸಂಘರ್ಷ ಸಮಿತಿಯ ಧಾರವಾಡ ಘಟಕ‌ ಬೆಂಬಲ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ನಡೆ ಖಂಡಿಸಿ ಡಿ.8 ರಂದು ಕರೆ ನೀಡಿದ ಭಾರತ ಬಂದ್ ಯಶಸ್ವಿಗೊಳಿಸಲು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಮನವಿ ಮಾಡಿದೆ. ಈ ಚಳವಳಿಗೆ ವರ್ತಕರು, ಹೊಟೇಲ್ ಮಾಲೀಕರು, ಕಾರ್ಖಾನೆ ಮಾಲೀಕರ ಸಂಘ-ಸಂಸ್ಥೆಗಳು ಅಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಸ್ವಯಂ ಪ್ರೇರಣೆಯಿಂದ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ಸೂಚಿಸಲಿವೆ. ರಸ್ತೆ ಸಾರಿಗೆ ಸಂಸ್ಥೆ, ಆಟೋ ಚಾಲಕರು, ಖಾಸಗಿ ವಾಹನಗಳ ಮಾಲೀಕರು 6 ಗಂಟೆ ಸಂಚಾರ ಸ್ಥಗಿತಗೊಳಿಸಿ ಬೆಂಬಲಿಸುವಂತೆ ವಿನಂತಿಸಿದರು.

ರಾಯಚೂರಿನಲ್ಲೂ ಭಾರತ್​ ಬಂದ್​ಗೆ ಕರೆ

ರೈತ ವಿರೋಧಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ನಾಳೆಯ ಭಾರತ್​ ಬಂದ್ ಕರೆಗೆ ತಾಲೂಕು ಸಿಪಿಐಎಂಎಲ್ ರೆಡ್ ಸ್ಟಾರ್ ಬೆಂಬಲಿಸಲಿದೆ ಎಂದು ಸಂಘದ ತಾಲೂಕು ಕಾರ್ಯದರ್ಶಿ ರವಿ ದಾದಸ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕಾಯ್ದೆಗಳನ್ನು ವಾಪಸ್​​ ಪಡೆಯುವಂತೆ ಆಗ್ರಹಿಸಿ ಕಳೆದ 10 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆ ರೈತ ಸಂಘಟನೆಗಳು ಡಿ.8 ರಂದು ಭಾರತ ಬಂದ್ ಗೆ ಕರೆ ನೀಡಿದ್ದು, ಅದನ್ನು ಸಿಪಿಐಎಂಎಲ್ ರೆಡ್ ಸ್ಟಾರ್ ಬೆಂಬಲಿಸಲಿದೆ ಎಂದರು.

ದಾವಣಗೆರೆ ಬಂದ್​​​ಗೆ ಜಿಲ್ಲಾ ಕಾಂಗ್ರೆಸ್​​ ಸಿದ್ಧ

ರೈತರು ಕರೆ ನೀಡಿರುವ ಭಾರತ್​‌ ಬಂದ್ ಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೆಂಬಲ ವ್ಯಕ್ತವಾಗಿದ್ದು, ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಂದ್ ಆಚರಿಸಲಾಗುವುದೆಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ರೈತರ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದು ರೈತರನ್ನು ಬಗ್ಗುಬಡಿಯುವ ಕೆಲಸಕ್ಕೆ ನರೇಂದ್ರ ಮೋದಿಯವರು ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ ಕಾಂಗ್ರೆಸ್​ನಿಂದ ರೈತರು ನಾಳೆ ಕರೆ ನೀಡಿರುವ ಬಂದ್​ಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ವರಿಷ್ಠರು ಕರೆ ನೀಡಿದ್ದಾರೆ. ಹೀಗಾಗಿ‌ ದಾವಣಗೆರೆಯಲ್ಲೂ ಬಂದ್ ಬೆಂಬಲಿಸಿ ರಸ್ತೆಗಿಳಿದು ಪ್ರತಿಭಟಿಸುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.