ETV Bharat / city

ಬೆಂಗಳೂರು ಹಿಂಸಾಚಾರಕ್ಕೆ ಧಾರವಾಡದಲ್ಲಿ ಸಿಡಿದೆದ್ದ ಸಂಘಟನೆಗಳು - ಬೆಂಗಳೂರು ಹಿಂಸಾಚಾರ ವಿರೋಧಿಸಿ ಪ್ರತಿಭಟನೆ

ಸಿಲಿಕಾನ್​​ ಸಿಟಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಧಾರವಾಡ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಅಲ್ಲದೆ ರಾಜ್ಯದಲ್ಲಿ ಪಿಎಫ್​​ಐ, ಎಸ್​​ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು.

Various association organization protest agianst KJ halli violence
ಬೆಂಗಳೂರು ಹಿಂಸಾಚಾರ
author img

By

Published : Aug 13, 2020, 7:30 PM IST

ಧಾರವಾಡ: ಬೆಂಗಳೂರು ಹಿಂಸಾಚಾರ ವಿರೋಧಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿ ಪಿಎಫ್​​ಐ, ಎಸ್​​ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಂಗಳೂರು ಹಿಂಸಾಚಾರಕ್ಕೆ ಧಾರವಾಡದಲ್ಲಿ ಸಿಡಿದೆದ್ದ ಸಂಘಟನೆಗಳು

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಹಿಂದೂ ಪರ ಕಾರ್ಯಕರ್ತರು ಬೆಂಗಳೂರು ಗಲಭೆ ಮಾಡಿದವರ ವಿರುದ್ದ ಧಿಕ್ಕಾರ ಕೂಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ನವ ನಿರ್ಮಾಣ ಸೇನೆ, ಭಜರಂಗದ ದಳ, ಹಿಂದೂ ಜಾಗರಣ ವೇದಿಕೆಗಳ ಕಾರ್ಯಕರ್ತರು ಸೇರಿ ಕೆಜಿ ಹಳ್ಳಿ ಹಿಂಸಾಚಾರದ ವಿರುದ್ಧ ಗುಡುಗಿದರು. ಅಲ್ಲದೆ ಪಿಎಫ್​​ಐ, ಎಸ್​​ಡಿಪಿಐ ಸಂಘಟನೆಗಳು ಇದರಲ್ಲಿ ಭಾಗಿಯಾಗಿವೆ, ಅವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.