ETV Bharat / city

ಹೆಗ್ಗೇರಿ ಆಯುರ್ವೇದ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು - ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯ

ಕಾಲೇಜಿನಿಂದ ಶಿಕ್ಷಕರು ಸೇರಿ ಒಟ್ಟು 36 ವಿದ್ಯಾರ್ಥಿಗಳು ಸೆಮಿನಾರ್​​ನಲ್ಲಿ ಭಾಗಿಯಾಗಿದ್ದರು. ಕಳೆದ ನವೆಂಬರ್ 30ರಂದು ಹುಬ್ಬಳ್ಳಿಗೆ ಆಗಮಿಸಿದ್ದರು. ಹುಬ್ಬಳ್ಳಿಗೆ ಬಂದ ನಂತರ ಕ್ವಾರಂಟೈನ್​ಲ್ಲಿದ್ದ ವಿದ್ಯಾರ್ಥಿಗಳು ಸಂಸ್ಥೆಯ ನಿರ್ದೇಶನದ ಮೇರೆಗೆ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದರು..

Hubli
ಹುಬ್ಬಳ್ಳಿ
author img

By

Published : Dec 4, 2021, 12:44 PM IST

ಹುಬ್ಬಳ್ಳಿ : ಸತ್ತೂರಿನ ಎಸ್​​ಡಿಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ವಾಣಿಜ್ಯ ನಗರಿ ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಅಯೋಧ್ಯೆಯಲ್ಲಿ ನಡೆದ ಆಯುರ್ವೇದ ಸೆಮಿನಾರ್​​ನಲ್ಲಿ ಭಾಗವಹಿಸಿದ್ದರು. ಕಳೆದ ನ. 27-28 ರಂದು ನಡೆದಿದ್ದ ಸಮಾವೇಶದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎನ್ನಲಾಗುತ್ತಿದೆ.

ಕಾಲೇಜಿನಿಂದ ಶಿಕ್ಷಕರು ಸೇರಿ ಒಟ್ಟು 36 ವಿದ್ಯಾರ್ಥಿಗಳು ಸೆಮಿನಾರ್​​ನಲ್ಲಿ ಭಾಗಿಯಾಗಿದ್ದರು. ಕಳೆದ ನವೆಂಬರ್ 30ರಂದು ಹುಬ್ಬಳ್ಳಿಗೆ ಆಗಮಿಸಿದ್ದರು. ಹುಬ್ಬಳ್ಳಿಗೆ ಬಂದ ನಂತರ ಕ್ವಾರಂಟೈನ್​ಲ್ಲಿದ್ದ ವಿದ್ಯಾರ್ಥಿಗಳು ಸಂಸ್ಥೆಯ ನಿರ್ದೇಶನದ ಮೇರೆಗೆ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದರು.

ಇಂದು ಇಬ್ಬರು ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಇಬ್ಬರಿಗೂ ಯಾವುದೇ ರೋಗ ಲಕ್ಷಣಗಳಿಲ್ಲ. ಹೀಗಾಗಿ, ಒಂದು ವಾರ ಕ್ವಾರಂಟೈನ್ ಇರಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 25 ಜನರಿಗೆ ಕೋವಿಡ್ ದೃಢ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.