ETV Bharat / city

ಕುಸುಗಲ್​ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವು - ಕುಸುಗಲ್​ ಅಪಘಾತ ಸುದ್ದಿ

ನಗರದ ಕುಸುಗಲ್-ಇಂಗಳಹಳ್ಳಿ ರಸ್ತೆಯಲ್ಲಿ ಟ್ರಾಕ್ಟರ್​ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

tractor-turn-over-two-death-in-hubli
ಟ್ರ್ಯಾಕ್ಟರ್ ಪಲ್ಟಿ
author img

By

Published : May 22, 2020, 3:43 PM IST

ಹುಬ್ಬಳ್ಳಿ: ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಕುಸುಗಲ್-ಇಂಗಳಹಳ್ಳಿ ರಸ್ತೆಯಲ್ಲಿ ನಡೆದಿದೆ.

ಕುಸುಗಲ್ ಗ್ರಾಮದ ಉಸ್ಮಾನಸಾಬ ಖಾದೀರಸಾಬ ಡಂಬಳ (30), ಅಭಿಷೇಕ ಸಿದ್ಧಪ್ಪ ಈರಣ್ಣವರ (16) ಮೃತಪಟ್ಟ ಯುವಕರು. ಜಮೀನು ಕೆಲಸಕ್ಕೆಂದು ಹೋಗುವಾಗ ಟ್ರ್ಯಾಕ್ಟರ್​ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ನುಗ್ಗಿದೆ.

ಇದರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ‌. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.