ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ರಸ್ತೆಯಲ್ಲಿ ಓಡಾಡುವ ಖಾಸಗಿ ವಾಹನ ಸವಾರರನ್ನು ಹಿಡಿದು ಬಿಸಿ ಮುಟ್ಟಿಸಿದ್ದ ಪೊಲೀಸರೇ ಇಂದು ಟೋಯಿಂಗ್ ವಾಹನದಲ್ಲಿ ರಾಜಾರೋಷವಾಗಿ ಚಲಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹುಬ್ಬಳ್ಳಿಯ ಬಸ್ ನಿಲ್ದಾಣ ಉದ್ಘಾಟನೆಗೊಂಡ ನಂತರ ರೂಲ್ಸ್ ಬ್ರೇಕ್ ಮಾಡಿ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ವಾಹನಗಳನ್ನ ಎತ್ತಿಕೊಂಡು ಹೋಗುವ ಟ್ರಾಫಿಕ್ ಟೋಯಿಂಗ್ ವಾಹನ, ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಹೊಸೂರಿನಿಂದ ಜೆ.ಜಿ.ಕಾಮರ್ಸ್ ಕಾಲೇಜಿನವರೆಗೂ ಚಿಗರಿ ಬಸ್ ಮುಂದೆಯೇ ಸಂಚರಿಸಿದೆ. ಇದನ್ನು ಕಂಡ ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.