ETV Bharat / city

ಮೂವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್​ ವರ್ಗಾಯಿಸಿ ರಾಜ್ಯ ಸರ್ಕಾರದಿಂದ ಆದೇಶ - ಬೆಂಗಳೂರು ಲೇಟೆಸ್ಟ್ ನ್ಯೂಸ್

ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಧಿಡೀರ್ ವರ್ಗಾವಣೆಗೊಳಿಸಿದೆ(three IPS officers transferred.

three IPS officers transferred
ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ
author img

By

Published : Nov 18, 2021, 5:47 PM IST

ಬೆಂಗಳೂರು/ಹುಬ್ಬಳ್ಳಿ: ಮೂವರು ಐಪಿಎಸ್ ಅಧಿಕಾರಿಗಳನ್ನು ಧಿಡೀರ್ ವರ್ಗಾವಣೆಗೊಳಿಸಿ(three IPS officers transferred) ರಾಜ್ಯ ಸರ್ಕಾರ ಆದೇಶ(state government order) ಹೊರಡಿಸಿದೆ.

three IPS officers transferred
ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ

ಡಿಸಿಪಿ ಕೆ. ರಾಮರಾಜನ್ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ವಿಭಾಗದಿಂದ ಬೆಂಗಳೂರು ನಗರದ ಕಮಾಂಡ್​ ಸೆಂಟರ್​ಗೆ, ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾರನ್ನು ಭದ್ರಾವತಿ ಉಪ ವಿಭಾಗದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ವಿಭಾಗದ ಡಿ.ಸಿ.ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮತ್ತು ಸಾಹಿಲ್ ಬಾಗ್ಲಾರಿಗೆ ಸಿ.ಐ.ಡಿ ಉಪ ಪೊಲೀಸ್ ಆಯುಕ್ತರಾಗಿ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಐ.ಪಿ.ಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಮ್ ಅವರನ್ನು ಭದ್ರಾವತಿ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

k ramarajan
ಕೆ. ರಾಮರಾಜನ್

ಮತಾಂತರ ಆರೋಪದ ಕೇಸ್ ಹಿನ್ನೆಲೆ, ಡಿಸಿಪಿಯಾಗಿದ್ದ ಕೆ. ರಾಮರಾಜನ್ ವರ್ಗಾವಣೆಯಾದರಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್​ ಅವರು, ರಾಮರಾಜನ್ ವಿರುದ್ಧ ಆರೋಪಿಸಿದ್ದರು. ಖುದ್ದು ಡಿಸಿಪಿಯೇ ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಪ್ರತಿಭಟಿಸಿದ್ದರು. ಇದಾದ ಕೆಲವು ದಿನಗಳಲ್ಲಿಯೇ ಡಿಸಿಪಿಯಾಗಿದ್ದ ರಾಮರಾಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: PSI, ಕಾನ್ಸಟೇಬಲ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.