ETV Bharat / city

ಕಳ್ಳತನ ಆರೋಪಿಗೆ ಕೊರೊನಾ: ಪೊಲೀಸರಿಗೆ ಆತಂಕ - Hubli police station

ಕಳ್ಳತನ ಆರೋಪದ ಮೇಲೆ ಬಂಧಿಸಲ್ಪಿಟ್ಟಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಕಳೆದ ಎರಡು-ಮೂರು ದಿನಗಳಿಂದ ಆತನ ಜೊತೆ ಹಲವಾರು ಪೊಲೀಸರು ಸಂಪರ್ಕ ಹೊಂದಿದ್ದು, ಈಗ ಅವರಲ್ಲಿ ಭೀತಿ ಶುರುವಾಗಿದೆ.

Theft accused infected with covid
ಕಳ್ಳತನ ಆರೋಪಿಗೆ ಕೊರೊನಾ ದೃಢ
author img

By

Published : Jun 30, 2020, 3:05 PM IST

ಹುಬ್ಬಳ್ಳಿ: ಕಳ್ಳತನ ಆರೋಪದ ಮೇಲೆ ಬಂಧಿಸಲ್ಪಿಟ್ಟಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದ್ದು, ಹುಬ್ಬಳ್ಳಿ ಉಪನಗರ ಠಾಣಾ ಪೊಲೀಸರಲ್ಲಿ ಆತಂಕ ಶುರುವಾಗಿದೆ.

ಜೂನ್​ 27ರಂದು ನಗರದ ಹಾರ್ಡ್​ವೇರ್ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು‌. ಆದರೆ ಇಂದು ಆತನಿಗೆ ಕೊರೊನಾ ದೃಢಪಟ್ಟಿದೆ.

ಈತನನ್ನು ಬಂಧಿಸಿದ ಬಳಿಕ ಕೋವಿಡ್​ ಟೆಸ್ಟ್​ ಮಾಡದೆ ಕೊಠಡಿಯೊಂದರಲ್ಲಿ ಇರಿಸಲಾಗಿತ್ತು. ಅದೇ ಕೊಠಡಿಯಲ್ಲಿ ಇನ್ನೊಬ್ಬ ಕೂಡ ಇದ್ದ. ಅಲ್ಲದೆ ಕಳೆದ ಎರಡು-ಮೂರು ದಿನಗಳಿಂದ ಆತನ ಜೊತೆ ಹಲವಾರು ಪೊಲೀಸರು ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.