ಧಾರವಾಡ: ಕೋವಿಡ್-19 ವ್ಯಾಕ್ಸಿನ್ ಪಡೆಯಲು ಜನರು ಮುಂದಾಗುತ್ತಿದ್ದಾರೆ. ಆದ್ರೆ ಕೆಲವೆಡೆ ಲಸಿಕೆ ಕೊರತೆ ಇರುವುದದರಿಂದ ಎಲ್ಲರಿಗೂ ಒಂದೇ ಬಾರಿ ಚುಚ್ಚುಮದ್ದು ನೀಡಲು ಸಾಧ್ಯವಾಗ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನಗರದಲ್ಲಿ ವಿದ್ಯಾರ್ಥಿನಿವೋರ್ವಳು ವ್ಯಾಕ್ಸಿನ್ ಸಿಗುತ್ತಿಲ್ಲವೆಂದು ಕಣ್ಣೀರಿಟ್ಟಿದ್ದಾಳೆ.
ಜಿಲ್ಲಾಸ್ಪತ್ರೆಗೆ ವಿದ್ಯಾ ಎಂಬ ವಿದ್ಯಾರ್ಥಿನಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದು, ಈಕೆ ಬಿಎ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತರೂ ವ್ಯಾಕ್ಸಿನ್ ಆರಂಭಿಸದ ಹಿನ್ನೆಲೆ ಲಸಿಕೆ ಪಡೆಯಲು ಬಂದವರು ಗಲಾಟೆ ಮಾಡಿದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದಾಳೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಸ್ಪತ್ರೆಗೆ ವ್ಯಾಕ್ಸಿನ್ ಪಡೆಯಲು ಹೆಚ್ಚು ಮಂದಿ ಬರುತ್ತಿದ್ದು, ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.