ಧಾರವಾಡ: ಒಂದೇ ಭಾರತ ಒಂದೇ ತುರ್ತು ಕರೆ. 112 ಗೆ ಕಾಲ್ ಮಾಡಿ ಪೊಲೀಸರು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
ಹೌದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 112 ಸೇವೆಯನ್ನು ಆರಂಭ ಮಾಡಿದೆ. ಒಂದೇ ಸಿಂಗಲ್ ನಂಬರನ್ನು ಈಗ ಲಾಂಚ್ ಮಾಡಿ 112 ಮುಖಾಂತರ ಜನರಿಗೆ ಸೇವೆಯನ್ನು ಕೊಡುವ ಕೆಲಸವನ್ನು ಇಲಾಖೆ ಮಾಡಲು ಮುಂದಾಗಿದೆ. ಯಾರೇ ಸಾರ್ವಜನಿಕರು ಕರೆ ಮಾಡಿದರೂ ಪೊಲೀಸರು ಅಲ್ಲೆ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ. ಆರೋಗ್ಯ, ಗಲಾಟೆ, ಅಗ್ನಿ ಶಾಮಕ ದಳ ಯಾವುದೇ ಸಮಸ್ಯೆಗಳಿದ್ದರು 112 ಗೆ ಕಾಲ್ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾದ ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಚಾಲನೆ ನೀಡಿದ್ದಾರೆ.
ಧಾರವಾಡದಲ್ಲಿ 6 ವಾಹನಗಳಿಗೆ ಇಂದು ಎಸ್ಪಿ ಕೃಷ್ಣಕಾಂತ ಅವರು ಚಾಲನೆ ನೀಡಿ ಇದರ ಬಗ್ಗೆ ಮಾತನಾಡಿದರು. ಜಿಲ್ಲೆಯಲ್ಲಿ ಒಳ್ಳೆಯ ರೆಸ್ಪಾನ್ಸ್ ಬರುತ್ತಾ ಇದೆ. ಪೊಲೀಸರು ಜನರ ಸಲುವಾಗಿ ಕೆಲಸವನ್ನು ಮಾಡುತ್ತಿದ್ದಾರೆ. ದಿನದ 24 ಗಂಟೆಗಳವರೆಗೆ 112 ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.