ಧಾರವಾಡ: ಕೃಷಿ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ ಸಮಾರಂಭ ನಡೆಯುತ್ತಿದೆ. ಆದ್ರೆ, ಕಾರ್ಯಕ್ರಮಕ್ಕೆ ಶಿಕ್ಷಕರು ಗೈರಾಗಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಕೃವಿವಿ ಶಿಕ್ಷಕರು ಕಳೆದ 14 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯಪಾಲರು ಪ್ರತಿಭಟನಾ ನಿರತ ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಇಂದು ಘಟಿಕೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಕರು ಗೈರಾಗುವ ಮೂಲಕ ಧರಣಿ ಮುಂದುವರೆಸಿದ್ದರು. ಕಾರ್ಯಕ್ರಮದ ಬಳಿಕ ಪ್ರತಿಭಟನಾಕಾರರನ್ನು ಭೇಟಿ ಮಾಡುವುದಾಗಿ ರಾಜ್ಯಪಾಲರು ತಿಳಿಸಿದ್ದರು ಅದಂರತೆ ಶಿಕ್ಷಕರ ಬಳಿ ತೆರಳಿದ ರಾಜ್ಯಪಾಲರು ಅವರ ಸಮಸ್ಯೆ ಆಲಿಸಿದರು.
ರಾಜ್ಯಪಾಲರ ಭೇಟಿ ಬಳಿಕ ಕೃವಿವಿ ಶಿಕ್ಷಕರು ಧರಣಿ ಹಿಂಪಡೆದುಕೊಂಡಿದ್ದಾರೆ ಹಾಗೆ ಸಮಸ್ಯೆ ಬಗೆಹರಿಸವುದಾಗಿ ರಾಜ್ಯಪಾಲರು ಈ ವೇಳೆ ಭರವಸೆ ನೀಡಿದ್ದಾರೆ.