ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಎಡವಟ್ಟಿನಿಂದ ರೋಗಿಗಳು ಕಷ್ಟ ಅನುಭವಿಸುವಂತಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಆಗಮಿಸುವ ವಿಚಾರದಲ್ಲಿ ಕಿಮ್ಸ್ ಸಿಬ್ಬಂದಿ ಪದೇ ಪದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿ ರೋಗಿಗಳಿಗೆ ನೋಂದಣಿ ಚೀಟಿ ಬೇಕು ಅಂದ್ರೆ ಕ್ಯಾಂಡಿಕ್ರಷ್ ಗೇಮ್ ಮುಗಿಯೋವರೆಗೂ ಕಾಯಬೇಕು. ರೋಗಿಗಳು, ರೋಗಿಗಳ ಸಂಬಂಧಿಕರು ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಲೇಬೇಕು.
ರೋಗಿಗಳಿಗೆ ನೋಂದಣಿ ಚೀಟಿ ನೀಡುವುದನ್ನು ಬಿಟ್ಟು ಸಿಬ್ಬಂದಿಯೊಬ್ಬ ಕ್ಯಾಂಡಿಕ್ರಷ್ ಗೇಮ್ ಆಡುತ್ತ ಕುಳಿತಿದ್ದಾನೆ. ಗಂಟೆಗಟ್ಟಲೇ ಕ್ಯೂನಲ್ಲಿ ರೋಗಿಗಳು ಕಾಯುತ್ತಿದ್ದರೂ ಕ್ಯಾರೇ ಎನ್ನದೇ ಗೇಮ್ನಲ್ಲಿ ಬ್ಯುಸಿಯಾಗಿದ್ದಾನೆ.
ಎಮರ್ಜೆನ್ಸಿ ವಾರ್ಡ್ನಲ್ಲೇ ಈ ರೀತಿಯ ದೃಶ್ಯವನ್ನು ರೋಗಿಯ ಸಂಬಂಧಿಯೊಬ್ಬರು ಸೆರೆ ಹಿಡಿದಿದ್ದಾರೆ. ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ನಿತ್ಯ ಕ್ಯಾಂಡಿಕ್ರಷ್ ಗೇಮ್ ಆಡುತ್ತ ಕುಳಿತುಕೊಳ್ಳುವ ಸಿಬ್ಬಂದಿ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.