ಹುಬ್ಬಳ್ಳಿ: ಹಾಡಹಗಲೇ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಕಸಬಾಪೇಟೆ ಪಠಾಣಗಲ್ಲಿಯಲ್ಲಿ ನಡೆದಿದೆ.
ಶಾಬುದ್ಧೀನ ಕೊಲೆಯಾದ ಯುವಕ. ಶಂಶುದ್ದೀನ ಮತ್ತು ಹಾಜಿ ಎಂಬವರು ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಕೊಲೆಯಾದ ಯುವಕ ಹಾಗೂ ಶಂಶುದ್ದೀನ ನಡುವೆ ಗಲಾಟೆ ನಡೆದಿತ್ತು.
ಆಗ ಹಿರಿಯರು ಜಗಳ ಬಿಡಿಸಿ ಬುದ್ದಿ ಹೇಳಿದ್ದರು. ಇಂದು ಮುಖಾಮುಖಿಯಾದಾಗ ಮತ್ತೆ ಇಬ್ಬರು ಜಗಳಕ್ಕಿಳಿದಿದ್ದಾರೆ. ಶಂಶುದ್ಧೀನ ಹಾಗೂ ಆತನ ಸಹಚರ ಹಾಜಿ ಚಾಕುವಿನಿಂದ 12 ಬಾರಿ ಬಲವಾಗಿ ಇರಿದಿದ್ದಾರೆ. ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.