ETV Bharat / city

ಹುಬ್ಬಳ್ಳಿಯಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ಮಹಿಳೆಗೆ ಸಹಾಯಹಸ್ತ ಚಾಚಿದ ಎಸ್​ಪಿ

ಆಸ್ಟ್ರೇಲಿಯಾ ಮೂಲದ ಮಹಿಳೆಯೊಬ್ಬರು ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದರು. ಲಾಕ್​ಡೌನ್ ಘೋಷಣೆಯಾದ್ದರಿಂದ ನಗರದ ರೇಣುಕಾ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದರು.‌ ಇದೀಗ ಈ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಎಸ್​ಪಿ ವರ್ತಿಕಾ ಕಟಿಯಾರ್ ಮಾಡಿದ್ದಾರೆ.

author img

By

Published : May 29, 2020, 1:34 PM IST

Updated : May 29, 2020, 1:41 PM IST

SP Vertika Katiyar
ಎಸ್​ಪಿ ವರ್ತಿಕಾ ಕಟಿಯಾರ್

ಹುಬ್ಬಳ್ಳಿ: ಲಾಕ್​ಡೌನ್ ವೇಳೆ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡು ಪರದಾಟ ನಡೆಸಿದ ಆಸ್ಟ್ರೇಲಿಯಾದ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಮೂಲಕ ಧಾರವಾಡದ ಎಸ್​ಪಿ ವರ್ತಿಕಾ ಕಟಿಯಾರ್ ಮಾನವೀಯತೆ ಮೆರೆದಿದ್ದಾರೆ.

ಆಸ್ಟ್ರೇಲಿಯಾ ಮೂಲದ ಮೈಶಿಯಾನ ನಿಯಾಂಗ್ ಎಂಬ ಮಹಿಳೆ ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದರು. ಲಾಕ್​ಡೌನ್ ಘೋಷಣೆಯಾದ್ದರಿಂದ ನಗರದ ರೇಣುಕಾ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದರು.‌ ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ತನ್ನ ದೇಶಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್​ಗೆ ಮನವಿ ಮಾಡಿದ್ದರು. ವಿದೇಶಿ ಮಹಿಳೆಗೆ ಸಹಾಯ ಮಾಡುವಂತೆ ಎಸ್​ಪಿ ವರ್ತಿಕಾ ಕಟಿಯಾರ್​ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಅದರಂತೆ ವರ್ತಿಕಾ ಕಟಿಯಾರ್ ಅವರು ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಪರ್ಕಿಸಿ ಮಹಿಳೆಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಆಸ್ಟ್ರೇಲಿಯಾ ಮಹಿಳೆ ನೆರವಿಗೆ ಬಂದ ಎಸ್​ಪಿ ವರ್ತಿಕಾ ಕಟಿಯಾರ್

ನಗರದ ರೇಣುಕಾ ಲಾಡ್ಜ್​ಗೆ ಭೇಟಿ ನೀಡಿದ್ದ ಎಸ್​ಪಿ, ಖಾಸಗಿ ವಾಹನd ವ್ಯವಸ್ಥೆ ಮಾಡಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಳುಹಿಸಲು ಸಿದ್ಧತೆ ಮಾಡಿದರು.‌ ನಂತರ ಮಹಿಳೆ ಬೆಂಗಳೂರಿನಿಂದ ದೆಹಲಿ ತಲುಪಿ, ದೆಹಲಿಯಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಎಸ್​ಪಿ ಅವರ ಈ ಕಾರ್ಯಕ್ಕೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಎಸ್​ಪಿ ವರ್ತಿಕಾ ಕಟಿಯಾರ್, ಆಧ್ಯಾತ್ಮಿಕ ಜ್ಞಾನ ‌ಕಲಿಕೆ ಹಿನ್ನೆಲೆಯಲ್ಲಿ ಆಗಮಿಸಿದ ಮಹಿಳೆಯನ್ನು ತಮ್ಮ ದೇಶಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ಅವರಿಗೆ ನಮ್ಮ ಸಿಬ್ಬಂದಿ ಆರ್ಥಿಕ ಸಹಾಯ ಮಾಡಿದ್ದಾರೆ ಎಂದರು. ಈ‌ ವೇಳೆ ಹು-ಧಾ ಡಿಸಿಪಿ‌ ಕೃಷ್ಣಕಾಂತ್, ಗ್ರಾಮೀಣ ಸಿಪಿಐ ಡಿಸೀಜಾ, ಉಪ ನಗರ ಸಿಪಿಐ ಸುಂದರೇಶ ಹೊಳೆಣ್ಣವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Last Updated : May 29, 2020, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.