ETV Bharat / city

ಸಿದ್ಧಾರೂಡರ ಸನ್ನಿದಾನಕ್ಕೆ ಸೋಲಾರ್ ತಂತ್ರಜ್ಞಾನ: ಅನ್ನದಾಸೋಹಕ್ಕೆ ವಿನೂತನ ಪ್ರಯತ್ನ - ಸೋಲಾರ್ ಪ್ಲಾಂಟ್

ಲಾಕ್​​ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಠದಲ್ಲಿ ಸಾರ್ವಜನಿಕ ಅನ್ನದಾಸೋಹ ಬಂದ್ ಆಗಿದ್ದರೂ ಕೂಡ ಸಾಧು ಸಂತರ ಹಾಗೂ ಮಠದ ಸಿಬ್ಬಂದಿಗಾಗಿ ಅಡುಗೆ ಮಾಡಲಾಗುತ್ತಿದೆ. ಅಲ್ಲದೇ ಈಗ ಅಳವಡಿಸಿರುವ ಸೌರಶಕ್ತಿ ವ್ಯವಸ್ಥೆ ‌ನಿತ್ಯ ಸುಮಾರು 5 ಸಾವಿರ ಜನರಿಗೆ ಅಡುಗೆ ಬೇಯಿಸುವ ಸಾಮರ್ಥ್ಯವನ್ನು ಹೊಂದಿದೆ.

Solar technology used for cooking for Siddharuda matth in Hubballi
ಸಿದ್ಧಾರೂಡರ ಸನ್ನಿದಾನಕ್ಕೆ ಸೋಲಾರ್ ತಂತ್ರಜ್ಞಾನ: ಅನ್ನದಾಸೋಹಕ್ಕೆ ವಿನೂತನ ಪ್ರಯತ್ನ
author img

By

Published : Jul 2, 2020, 11:40 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧವಾದ ಮಠವಾಗಿರುವ ಸದ್ಗುರು ಸಿದ್ಧಾರೂಡರ ಮಠದಲ್ಲಿ ಅನ್ನ ದಾಸೋಹಕ್ಕೆ ತನ್ನದೇ ಆದ ಪರಂಪರೆಯಿದೆ, ಈ ಪರಂಪರೆಗೆ ಮತ್ತಷ್ಟು ಅಧುನಿಕ ತಂತ್ರಜ್ಞಾನದ ಮೂಲಕ ಮುನ್ನಡೆಸಿಕೊಂಡು ಹೋಗಲು ಆಡಳಿತ ಮಂಡಳಿ ಹೊಸ ಯೋಜನೆಗೆ ಕೈ ಹಾಕಿದೆ.

ಸಿದ್ಧಾರೂಡರ ಸನ್ನಿದಾನಕ್ಕೆ ಸೋಲಾರ್ ತಂತ್ರಜ್ಞಾನ: ಅನ್ನದಾಸೋಹಕ್ಕೆ ವಿನೂತನ ಪ್ರಯತ್ನ

ಹೌದು..ಶ್ರೀ ಮಠದ ಟ್ರಸ್ಟ್ ಕಮಿಟಿ ಹಾಗೂ ಭಕ್ತಾಧಿಗಳ ದೇಣಿಗೆಯ ಹಣದಿಂದ ಸುಮಾರು 59 ಲಕ್ಷ ರೂ.ವೆಚ್ಚದಲ್ಲಿ ಸಿದ್ಧಾರೂಡರ ಮಠದ ಅಡುಗೆ ಮನೆಗೆ ಸೋಲಾರ್ ಪವರ್ ವ್ಯವಸ್ಥೆ ಮಾಡಲಾಗಿದೆ.

ಲಾಕ್​​ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಠದಲ್ಲಿ ಸಾರ್ವಜನಿಕ ಅನ್ನದಾಸೋಹ ಬಂದ್ ಆಗಿದ್ದರೂ ಕೂಡ ಸಾಧು ಸಂತರ ಹಾಗೂ ಮಠದ ಸಿಬ್ಬಂದಿಗಾಗಿ ಅಡುಗೆ ಮಾಡಲಾಗುತ್ತಿದೆ. ಅಲ್ಲದೇ ಈಗ ಅಳವಡಿಸಿರುವ ಸೌರಶಕ್ತಿ ವ್ಯವಸ್ಥೆ ‌ನಿತ್ಯ ಸುಮಾರು 5 ಸಾವಿರ ಜನರಿಗೆ ಅಡುಗೆ ಬೇಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಿದ್ಧಾರೂಡರ ಮಠದ ಯಾತ್ರಿ ನಿವಾಸದ ಮೇಲೆ ವರ್ತುಲಾಕಾರದಲ್ಲಿ ಸೋಲಾರ್ ಪ್ಯಾನೆಲ್ ಕೂಡಿಸಲಾಗಿದೆ. ಬೆಳಗಾವಿಯ ಯುನಿಸನ್ಸ್ ಟೆಕ್ನಾಲಜಿಸ್​​ ಟೆಂಡರ್ ಪಡೆದಿದ್ದು, ಈಗಾಗಲೇ ಜೋಡಣೆ ಕಾರ್ಯಪೂರ್ಣಗೊಂಡಿದ್ದು, ಶೀಘ್ರವಾಗಿ ಕಾರ್ಯ ರೂಪಕ್ಕೆ ಬರಲಿದೆ.

ಅಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಗೆ ಇದೊಂದು ಉತ್ತಮ ಉದಾಹರಣೆಯಾಗಲಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.