ಧಾರವಾಡ: ಜಿಲ್ಲೆಯಲ್ಲಿ ಇಂದು 75 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 832ಕ್ಕೇರಿಕೆಯಾಗಿದೆ.
ಇಂದು 27 ಜನರಿಗೆ ಸೋಂಕಿತರ ಸಂಪರ್ಕದಿಂದ, 32 ಜನರಲ್ಲಿ ಐಎಲ್ಐ ಕಾರಣ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ. ಸಾರಿ ತೊಂದರೆ ಇದ್ದ ಇಬ್ಬರು, ಅಂತರ್ ಜಿಲ್ಲಾ ಪ್ರವಾಸದಿಂದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. 13 ಸೋಂಕಿತರ ಸಂಪರ್ಕ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಜುಲೈ 3ರಿಂದ ಜುಲೈ 9ರ ಅವಧಿಯಲ್ಲಿ 7 ಜನ ಮೃತಪಟ್ಟಿರುವ ಕುರಿತು ಆರೋಗ್ಯ ಇಲಾಖೆ ಇಂದಿನ ಬುಲೆಟಿನ್‌ನಲ್ಲಿ ಮಾಹಿತಿ ನೀಡಿದ್ದು, ಸಾವಿನ ಸಂಖ್ಯೆ 27ಕ್ಕೇರಿದೆ. ಇಲ್ಲಿವರೆಗೆ 293 ಜನ ಸೋಂಕಿತರು ಗುಣಮುಖರಾಗಿದ್ದಾರೆ.