ETV Bharat / city

ಹುಬ್ಬಳ್ಳಿ: ಎಸ್​ಬಿಐ ಬ್ಯಾಂಕ್ ವ್ಯವಸ್ಥಾಪಕರನ್ನೇ ವಂಚಿಸಿ ಲಕ್ಷಾಂತರ ರೂ. ವಂಚನೆ

ಆರ್.ಎನ್.ಎಸ್ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಉಣಕಲ್ ಎಸ್​ಬಿಐ ಬ್ಯಾಂಕ್ ವ್ಯವಸ್ಥಾಪಕರನ್ನು ನಂಬಿಸಿ 24,95,900 ರೂಪಾಯಿಗಳನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

hubli
hubli
author img

By

Published : Feb 24, 2021, 1:20 PM IST

ಹುಬ್ಬಳ್ಳಿ: ಉಣಕಲ್ ಎಸ್​ಬಿಐ ಬ್ಯಾಂಕ್ ವ್ಯವಸ್ಥಾಪಕರನ್ನೇ ಆನ್​ಲೈನ್ ವಂಚಕನೊಬ್ಬ ನಂಬಿಸಿ 24,95,900 ರೂಪಾಯಿಗಳನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಆರ್.ಎನ್.ಎಸ್ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ಕರೆ ಮಾಡಿ ನಂಬಿಸಿರುವ ವಂಚಕ, 24,95,900 ರೂಪಾಯಿಗಳನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.

ಫೆಬ್ರುವರಿ 20ರಂದು ಬೆಳಗ್ಗೆ 11.30 ರ ವೇಳೆ ಬ್ಯಾಂಕ್ ವ್ಯವಸ್ಥಾಪಕಿ ಮೀನಾ ಕೆ.ವಿ ಅವರಿಗೆ ಕರೆ ಮಾಡಿದ ವಂಚಕ ಆರ್.ಎನ್.ಎಸ್ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ಸುನೀಲ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದಾನೆ. ಬ್ಯಾಂಕಿನ ಬಡ್ಡಿ ಮತ್ತು ಓವರ್ ಡ್ರಾಫ್ಟ್ ಸೌಲಭ್ಯದ ಬಗ್ಗೆ ಮಾತನಾಡಬೇಕಿದ್ದು, ಮಧ್ಯಾಹ್ನ 3 ಕ್ಕೆ ಸಭೆಯಿದೆ, ಬ್ಯಾಂಕಿನವರು ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾನೆ.

ಮತ್ತೆ ಮಧ್ಯಾಹ್ನ 1ಕ್ಕೆ ಕರೆ ಮಾಡಿ, ಕೆಲಸದ ಮೇರೆಗೆ ಬೆಳಗಾವಿಗೆ ಬಂದಿದ್ದು, ವಾಟ್ಸ್​ಆ್ಯಪ್​​ಗೆ ಕಳುಹಿಸುವ ಗ್ರಾಹಕರ ಖಾತೆಗೆ ತುರ್ತಾಗಿ ಕಂಪನಿಯ ಖಾತೆಯಿಂದ ಹಣವನ್ನು ಆರ್​ಟಿಜಿಎಸ್ ಮಾಡಲು ಕೋರಿದ್ದಾನೆ. ಅದರಂತೆ ಬ್ಯಾಂಕ್ ವ್ಯವಸ್ಥಾಪಕರು ತರುಣ್​ ಶರ್ಮಾ ಹೆಸರಿನ ಐಸಿಐಸಿಐ ಬ್ಯಾಂಕ್ ಖಾತೆಗೆ 9,85,700 ರೂಪಾಯಿ ಹಾಗೂ ಉಜಾಲಾ ಗುಪ್ತಾ ಹೆಸರಿನ ಖಾತೆಗೆ 15,10,200 ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ.

ಇನ್ನು ಉಣಕಲ್​ನಲ್ಲಿರುವ ಆರ್.ಎನ್.ಎಸ್ ಮೋಟಾರ್ಸ್​ಗೆ ಮಧ್ಯಾಹ್ನ 3 ಕ್ಕೆ ವ್ಯವಸ್ಥಾಪಕಿ ಮೀನಾ ಸಭೆಗೆ ತೆರಳಿದಾಗ, ತಾವೂ ಮೋಸ ಹೋಗಿರುವುದು ತಿಳಿದುಬಂದಿದ್ದು, ತಕ್ಷಣವೇ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.