ಹುಬ್ಬಳ್ಳಿ: ಕೊರೊನಾ ತಡೆಗಟ್ಟುಲು ಲಾಕ್ಡೌನ್ ಹಿನ್ನೆಲೆ ಎಲ್ಲರೂ ತಾವು ಇದ್ದ ಸ್ಥಳಗಳಲ್ಲಿ ಇರುವುಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದೀಗ ಲಾಕ್ಡೌನ್ ಸಡಿಲಗೊಳಿಸಿ ತಮ್ಮ ತಮ್ಮ ಊರುಗಳಿಗೆ ತೆರೆಳುವಂತೆ ಕಾರ್ಮಿಕರಿಗೆ ಅವಕಾಶ ನೀಡಲಾಗುದ್ದು, 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ.
ಆದರೆ ರಾಯನಾಳ ಗ್ರಾಮದಲ್ಲಿ ಗ್ರಾಮಸ್ಥರು ತಮ್ಮ ಸ್ವ-ಇಚ್ಛೆಯಿಂದ ಕ್ವಾರಂಟೈನ್ ಇರುವ ಸ್ಥಳಕ್ಕೆ ಮುಳ್ಳಿನ ಬೇಲಿ ಹಾಕುವುದರ ಮೂಲಕ ತಮ್ಮ ಊರಿನ ಸುರಕ್ಷತೆಗೆ ಮುಂದಾಗಿದ್ದಾರೆ.
ನಗರದ ರಾಯನಾಳ ಗ್ರಾಮದ ಮಧ್ಯದಲ್ಲಿರುವ ದೇವರಾಜ ಅರಸು ಮೆಟ್ರಿಕ್ ಪೂರ್ವ ಗಂಡು ಮಕ್ಕಳ ವಸತಿ ನಿಲಯವನ್ನು ಕ್ವಾರಂಟೈನ್ ಕೇಂದ್ರ ಮಾಡುವುದಾಗಿ ನಿರ್ಧರಿಸಿದ ಕಾರಣ ಗ್ರಾಮಸ್ಥರು ವಸತಿ ನಿಲಯದ ಸುತ್ತಮುತ್ತ ಮುಳ್ಳಿನ ಬೇಲಿ ಹಾಕುತ್ತಿರುವ ದೃಶ್ಯ ಕಂಡು ಬಂದಿದೆ. ನಾಳೆ ಜಿಲ್ಲೆಗೆ ಸುಮಾರು 1,000ಕ್ಕೂ ಹೆಚ್ಚಿನ ವಲಸೆ ಕಾರ್ಮಿಕರು ಆಗಮಿಸುವ ಹಿನ್ನೆಲೆ ಈ ಮಹತ್ವದ ನಿರ್ಣಯ ತೆಗೆದುಕೊಂಡು ಸುರಕ್ಷತೆ ಮಾಡಿಕೊಂಡಿದ್ದಾರೆ.
ಈ ವಸತಿ ನಿಲಯದ ಕಾಂಪೌಂಡ್ಗೆ ಹತ್ತಿರವಾಗಿ ಮನೆಗಳಿದ್ದು, ಯಾರಿಗೂ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಈ ಮುಳ್ಳಿನ ಬೇಲಿ ಹಾಕಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.