ಧಾರವಾಡ: ಜಿಲ್ಲೆಯ ಕೊರೊನಾ ಬುಲೆಟಿನ್ ಬಿಡುಗಡೆಗೊಂಡಿದ್ದು, 84 ಜನ ಶಂಕಿತರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 90 ಜನರ ವರದಿ ಬರಬೇಕಿದೆ.

ನಿನ್ನೆ ದಾಖಲಾಗಿದ್ದ ಒಟ್ಟು 76 ಶಂಕಿತರ ಸಹಿತ 84 ವರದಿ ನೆಗೆಟಿವ್ ಬಂದಿದ್ದು, ಇಂದು 24 ಗಂಟೆಗಳಲ್ಲಿ 99 ಜನರಲ್ಲಿ ಕೊರೊನಾ ಗುಣಲಕ್ಷ್ಮಣ ಕಾಣಿಸಿಕೊಂಡಿದೆ. ಇಂದು ಪತ್ತೆಯಾಗಿದ್ದರಲ್ಲಿ 8 ಜನರ ವರದಿ ನೆಗೆಟಿವ್ ಬಂದಿವೆ.
9 ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1353 ಜನರ ಮೇಲೆ ನಿಗಾ ವಹಿಸಲಾಗಿದೆ. 626 ಜನರನ್ನು 14 ದಿನಗಳ ಹೋಮ್ ಐಸೋಲೇಷನ್ನಲ್ಲಿ ಇಡಲಾಗಿದೆ. 59 ಜನರಿಂದ 14 ದಿನಗಳ ಐಸೋಲೇಷನ್ ಹಾಗೂ 645 ಜನರಿಂದ 28 ದಿನಗಳ ಐಸೋಲೇಷನ್ ಪೂರ್ಣಗೊಂಡಿದೆ.