ಹುಬ್ಬಳ್ಳಿ: ಹಿರಿಯ ಪತ್ರಕರ್ತ, 'ನಾಡೋಜ' ಪಾಟೀಲ ಪುಟ್ಟಪ್ಪ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಕುಟುಂಬಸ್ಥರಿಂದ ಮಾಹಿತಿ ದೊರೆತಿದೆ.
ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಪು ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರಾಗಿದ್ದು, ಸ್ಥಿತಿ ಗಂಭೀರವಾಗಿತ್ತು. ಕಿಮ್ಸ್ ವೈದ್ಯರ ತಂಡ ನಿನ್ನೆಯಿಂದ ಚಿಕಿತ್ಸೆ ಮುಂದುವರೆಸಿದ್ದರು. ಇಂದು ಬೆಳಿಗ್ಗೆ ಸ್ವಲ್ಪ ಗಂಜಿ ಸೇವಿಸಿದ್ದು, ಅವರ ಆರೋಗ್ಯ ಸುಧಾರಿಸಿದೆ.