ETV Bharat / city

ಅಭಿಮಾನಿ ಮನೆಗೆ ದಿಢೀರ್​ ಎಂಟ್ರಿ ಕೊಟ್ಟ ಅಪ್ಪು... ಪುನೀತ್​ ಕಂಡು ಪುಳಕಿತಗೊಂಡ ಕುಟುಂಬ - ಪುನೀತ್​ ರಾಜ್​ಕುಮಾರ್

ಅಭಿಮಾನಿಗಳು ಸ್ಟಾರ್ ನಟರ ಮನೆಗೆ ಭೇಟಿ‌ ನೀಡುವುದು‌ ಕಾಮನ್.‌ ಆದ್ರೆ ಸ್ಟಾರ್​​​​ ​ ನಟ ಅಭಿಮಾನಿಯ ಮನೆಗೆ ದಿಢೀರ್​ ಎಂಟ್ರಿ ಕೊಟ್ರೆ ಹೇಗಿರತ್ತೆ. ರಾಜ್ಯ ವಾಣಿಜ್ಯ ನಗರಿ ಇಂದು ಇಂತಹ ಒಂದು ಸನ್ನವೇಶಕ್ಕೆ ಸಾಕ್ಷಿಯಾಯ್ತು. ಕನ್ನಡದ ರಾಜಕುಮಾರ ಪುನೀತ್​ ರಾಜ್​ಕುಮಾರ್​ ತಮ್ಮ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಆತನಿಗೆ ಶಾಕ್​ ನೀಡಿದ್ರು.

Puneeth Rajkumar sudden visit to fan house
author img

By

Published : Aug 27, 2019, 10:48 AM IST

Updated : Aug 27, 2019, 11:59 AM IST

ಹುಬ್ಬಳ್ಳಿ: ಇಂದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಗರದ ಕ್ವಾಯಿನ್ ರಸ್ತೆಯಲ್ಲಿರುವ ತಮ್ಮ ಅಭಿಮಾನಿ ರಘು ಎಂಬುವವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಅಚ್ಚರಿಯುಂಟು ಮಾಡಿದರು.

ಪುನೀತ್ ಅಭಿಮಾನಿಯಾದ ರಘು, ಪುನೀತ್​ಗೆ ತಮ್ಮ ಮನೆಗೆ ಬರುವಂತೆ ಪದೇ ಪದೆ ಒತ್ತಾಯಿಸುತ್ತಿದ್ದರಂತೆ. ಅಂತೆಯೇ ಪುನೀತ್, ರಘು ಅವರ ಬಳಿ ನಿಮ್ಮ ಮನೆಗೆ ಬರುತ್ತೇನೆ ಎಂದು‌ ಮಾತುಕೊಟ್ಟಿದ್ದರು.‌ ಅದೇ ರೀತಿ ಇಂದು ಬೆಳಗ್ಗೆ ಏಕಾಏಕಿಯಾಗಿ ರಘು ಅವರ ಮನೆಗೆ ಭೇಟಿ ನೀಡಿರುವುದು, ರಘು ಅವರ ಕುಟುಂಬಕ್ಕೆ ಸಂತೋಷ ತಂದಿದೆ.‌

ಅಭಿಮಾನಿ ಮನೆಗೆ ದಿಢೀರ್​ ಎಂಟ್ರಿ ಕೊಟ್ರು ಅಪ್ಪು

ತಮ್ಮ ಮನೆಗೆ ಆಗಮಿಸಿದ ಅಪರೂಪ ಅತಿಥಿ ಕಂಡು ಪುಳಕಿತಗೊಂಡ ಕುಟುಂಬದ ಸದಸ್ಯರ ಜೊತೆಗೆ ಪುನೀತ್​ ಕಾಫಿ ಸವಿದು, ರಘು ಅವರ ಮಗನ ಜೊತೆ ಆಟವಾಡಿ ಅವರ ಮನೆಯ ಅಲ್ಬಂ ಫೋಟೋಗಳನ್ನು ವೀಕ್ಷಣೆ ಮಾಡಿದರು. ಮನೆಯವರ ಜೊತೆ ಕೆಲಹೊತ್ತು ಕಳೆದ ಪುನೀತ್​ಗೆ, ಶಾಲು ಹೊದಿಸಿ‌ ಸನ್ಮಾನ ಮಾಡಲಾಯಿತು. ಈ ಮೂಲಕ ರಾಜಕುಮಾರ, ಅಭಿಮಾನಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದು, ರಘು ಕುಟುಂಬದ ಸಂತೋಷಕ್ಕೆ‌ ಪಾರವೇ ಇಲ್ಲದಂತಾಗಿದೆ.

Intro:ಹುಬ್ಬಳ್ಳಿ-01

ಸ್ಟಾರ್ ನಟರು ಅಭಿಮಾನಿಗಳ ಮನೆಗೆ ಭೇಟಿ‌ ನೀಡುವದು‌ ಕಾಮನ್.‌ ಆದ್ರೆ ಇಂದು ಪವರ್ ಸ್ಟಾರ್ ಪುನೀತ್ ರಾಜುಕುಮಾರ್ ನಗರದ ಕ್ವಾಯಿನ್ ರಸ್ತೆಯಲ್ಲಿರುವ ತಮ್ಮ ಅಭಿಮಾನಿ ರಘು ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಅಚ್ಚರಿಯನ್ನುಂಟು ಮಾಡಿದರು.
ಪುನೀತ್ ಅಭಿಮಾನಿಯಾದ ರಘು ಅವರು, ಪುನೀತ್ ರಾಜಕುಮಾರ್ ಅವರಿಗೆ ತಮ್ಮ ಮನೆಗೆ ಬರುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಆದ್ರೆ ಪುನೀತ್ ರಾಜಕುಮಾರ ಅವರು ರಘು ಅವರಿಗೆ ನಿಮ್ಮ ಮನೆಗೆ ಬರುತ್ತೇನೆ ಎಂದು‌ ಮಾತುಕೊಟ್ಟಿದ್ದರು.‌ ಅದೇ ರೀತಿ ಇಂದು ಬೆಳಗ್ಗೆ ಏಕಾಏಕಿಯಾಗಿ ರಘು ಅವರ ಮನೆಗೆ ಭೇಟಿ ನೀಡಿದ್ದು, ರಘು ಅವರ ಕುಟುಂಬಕ್ಕೆ ಸಂತೋಷವನ್ನು ತಂದಿದೆ.‌
ತಮ್ಮ‌ ಮನೆಗೆ ಆಗಮಿಸಿದ ಅಪರೂಪ ಅತಿಥಿ ಕಂಡು ಪುಳಕಿತಗೊಂಡ ಕುಟುಂಬ ಸದಸ್ಯರ ಜೊತೆ ಕಾಪಿ ಕುಡಿದು, ರಘು ಅವರ ಮಗನ ಜೊತೆ ಆಟವಾಡಿ ಅವರ ಮನೆಯ ಅಲ್ಬಂ ಫೋಟೋಗಳನ್ನು ವೀಕ್ಷಣೆ ಮಾಡಿದರು. ಮನೆಯವರ ಜೊತೆ ಕೆಲ ಕಾಲ‌ಕಳೆದ ಪುನೀತ್ ರಾಜಕುಮಾರ ಅವರಿಗೆ ಶಾಲು ಹೊದಿಸಿ‌ ಸನ್ಮಾನ ಮಾಡಲಾಯಿತು. ಈ ಮೂಲಕ ಪುನೀತ್ ರಾಜಕುಮಾರಗ ಅಭಿಮಾನಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದು, ರಘು ಕುಟುಂಬ ಸಂತೋಷಕ್ಕೆ‌ ಪಾರವೇ ಇಲ್ಲದಂತಾಗಿದೆ.Body:H B GaddadConclusion:Etv hubli
Last Updated : Aug 27, 2019, 11:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.