ETV Bharat / city

ಅಪ್ಪು ಮೇಲಿನ ಅಭಿಮಾನ: ಹುಬ್ಬಳ್ಳಿಯಿಂದ ಪಾದಯಾತ್ರೆ ಆರಂಭಿಸಿದ ಅಭಿಮಾನಿ

ಪುನೀತ್ ರಾಜ್ ಕುಮಾರ್ ಅಭಿಮಾನಿಯಾದ ಧಾರವಾಡ ಜಿಲ್ಲೆಯ ಯರಿಬೂದಿಹಾಳ ಗ್ರಾಮದ ಕಲಾವಿದ ಬಸವರೆಡ್ಡಿ ಗೋಗಣ್ಣವರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ನೀಡಲು ಪಾದಯಾತ್ರೆ ಆರಂಭಿಸಿದ್ದಾರೆ.

puneeth rajkumar fan padayatra to bangalore kanteerava studio from hubli
ಹುಬ್ಬಳ್ಳಿಯಿಂದ ಪಾದಯಾತ್ರೆ ಆರಂಭಿಸಿದ ಅಪ್ಪು ಅಭಿಮಾನಿ
author img

By

Published : Feb 10, 2022, 9:44 AM IST

ಹುಬ್ಬಳ್ಳಿ (ಧಾರವಾಡ): ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನೆನಪು ಅಭಿಮಾನಿಗಳಲ್ಲಿ ಸದಾ ಹಸಿರು. ಅಪ್ಪು ಅಭಿಮಾನಿಯಾದ ಧಾರವಾಡದ ಜಿಲ್ಲೆಯ ಯರಿಬೂದಿಹಾಳ ಗ್ರಾಮದ ಕಲಾವಿದ ಬಸವರೆಡ್ಡಿ ಗೋಗಣ್ಣವರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಲು ಪಾದಯಾತ್ರೆ ಆರಂಭಿಸಿದ್ದಾರೆ.

ಹುಬ್ಬಳ್ಳಿಯ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿರುವ ಬಸವರಾಜ, ಡಾ.ರಾಜ್ ಕುಟುಂಬದ ಅಭಿಮಾನಿಯಾಗಿದ್ದು, ಅವರನ್ನು ಕಣ್ಣಾರೆ ನೋಡುವ ಬಯಕೆ ಹೊಂದಿದ್ದರು. ಆದರೆ ಅಪ್ಪು ಅಕಾಲಿಕ ಮರಣದಿಂದ ಅದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಬಂಟ್ವಾಳ: ಟಿಕ್​ಟಾಕ್ ಕಮಲಜ್ಜಿ ನಿಧನ

ಹೀಗಾಗಿ ಪುನೀತ್ ರಾಜ್​​ಕುಮಾರ್​ ಅವರ ಜೀವನದ ಆದರ್ಶಗಳು ಹಾಗೂ ಸಾಮಾಜಿಕ ಸೇವೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಸಮಾಧಿ ಇರುವ ಜಾಗಕ್ಕೆ ಹುಬ್ಬಳ್ಳಿಯಿಂದ ಪಾದಯಾತ್ರೆ ಮೂಲಕ ತಲುಪಲಿದ್ದಾರೆ. ಇಂದಿನಿಂದ ಪಾದಯಾತ್ರೆ ಆರಂಭಿಸಿದ್ದು, ಅವರನ್ನು ಪುನೀತ್​ ಅಭಿಮಾನಿಗಳು ಬೀಳ್ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.