ಧಾರವಾಡ: ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆ ನವಲಗುಂದ ಪಿಎಸ್ಐ ಜಯಪಾಲ ಪಾಟೀಲ ಅವರನ್ನು ಸಸ್ಪೆಂಡ್ ಮಾಡಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಆದೇಶ ಹೊರಡಿಸಿದ್ದಾರೆ.
ಕಳೆದ ವಾರ ಅತ್ಯಾಚಾರ ಆರೋಪಿ ನದಾಫ ಎಂಬುವವನನ್ನು ಪೊಲೀಸರು ನವಲಗುಂದ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಈ ವೇಳೆ ಸಂತ್ರಸ್ತೆಯ ಸಂಬಂಧಿ, ಆರೋಪಿ ನದಾಫನನ್ನು ಕೊಲೆ ಮಾಡಿದ್ದರು. ಪೊಲೀಸರು ಕಾವಲು ಇದ್ದಾಗಲೇ ಕೊಲೆ ನಡೆದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದಡಿ ಪಿಎಸ್‌ಐ ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.