ಧಾರವಾಡ: ಗುಡ್ ಮಾರ್ನಿಂಗ್, ಶುಭ ಮುಂಜಾನೆ ನಾನು ನಿಮ್ಮ ಆರ್ಜೆ ಮಾತಾಡ್ತೀರೋದು ಎಂಬ ಮಾತುಗಳನ್ನು ನೀವು ಎಫ್ಎಂ ಕೇಂದ್ರಗಳಲ್ಲಿ ಕೇಳಿರುತೀರಿ. ಆದ್ರೆ ಇದೀಗ ಬಂಧಿಖಾನೆಯಲ್ಲಿರುವ ಖೈದಿಗಳಿಗಾಗಿ ಧಾರವಾಡ ಕೇಂದ್ರ ಕಾರಾಗೃಹ ವಿನೂತನ ಕಾರ್ಯಕ್ರಮ ರೂಪಿಸಿದೆ.
ಹೌದು. ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಖೈದಿಗಳಲ್ಲಿ ಹುಮ್ಮಸ್ಸು ತುಂಬಲು ಸಜ್ಜಾಗಿದೆ. ಒಟ್ಟು 4 ಲಕ್ಷ 60 ಸಾವಿರ ರೂಪಾಯಿ ವೆಚ್ಚದಲ್ಲಿ ಎಫ್ಎಂ ರೇಡಿಯೋ ಕೇಂದ್ರ ಆರಂಭಗೊಂಡಿದ್ದು, ಒಟ್ಟು 18 ಎಕರೆ ವಿಸ್ತಾರವುಳ್ಳ ಜೈಲಿನೊಳಗೆ ಮಾತ್ರ ಪ್ರಸಾರದ ವ್ಯಾಪ್ತಿ ಹೊಂದಿದೆ.
ಖೈದಿಗಳನ್ನು ಸದಾ ಚೈತನ್ಯದಿಂದ ಇಡುವುದೇ ಜೈಲು ಸಿಬ್ಬಂದಿಗೆ ದೊಡ್ಡ ಸವಾಲು. ಇದೇ ಕಾರಣಕ್ಕೆ ಈಗ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಹೊಸದಾಗಿ ಎಫ್ಎಂ ರೇಡಿಯೋ ಕೇಂದ್ರ ಆರಂಭಿಸಲಾಗಿದ್ದು, ಬಂಧಿಯಾಗಿರುವವರ ಜತೆಗೆ ನಾಲ್ಕು ಜನ ಜೈಲು ಸಿಬ್ಬಂದಿ ರೇಡಿಯೋ ಕೇಂದ್ರ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ನ್ಯೂಯಾರ್ಕ್ನ ಶಾಲೆಗಳಲ್ಲಿ ಸಸ್ಯಾಹಾರ ಉತ್ತೇಜನಕ್ಕೆ 'ವೀಗನ್ ಫ್ರೈಡೆ' ಜಾರಿ.. ಕಾರಣ ಏನು ಗೊತ್ತೇ?
ಈ ಎಫ್ಎಂ ರೇಡಿಯೋ ಕೇಂದ್ರದಲ್ಲಿ ಬೆಳಗ್ಗೆ 7-30 ರಿಂದ 8-30 ಹಾಗೂ ರಾತ್ರಿ 7-30 ರಿಂದ 8-30ರವರೆಗೆ ತನ್ನದೇ ವ್ಯಾಪ್ತಿ ಹೊಂದಿರುವ ಪ್ರದೇಶದಲ್ಲಿ ಪ್ರಸಾರವಾಗುತ್ತದೆ. ಇನ್ನೊಂದು ವಿಶೇಷತೆ ಎಂದರೆ ಜೈಲಿನಲ್ಲಿರುವವರು ಯಾರು ಬೇಕಾದರೂ ಹೋಗಿ ಅಲ್ಲಿ ಹಾಡು, ಕಥೆ ಹೀಗೆ ಮುಂತಾದವುಗಳ ಕುರಿತು ಮಾತನಾಡಬಹುದಾಗಿದೆ. ಅಲ್ಲಿರುವ ಬಂಧಿಗಳ ಜನ್ಮ ದಿನವಿದ್ದರೆ ಹೋಗಿ ವಿಶ್ ಸಹ ಮಾಡಬಹುದಾಗಿದೆ.
ಒಟ್ಟಿನಲ್ಲಿ ಸಜಾ ಬಂಧಿಗಳು ಇದೀಗ ರೇಡಿಯೋ ಜಾಕಿಗಳಾಗುವ ಕಾಲ ಕೂಡ ಸನ್ನಿಹಿತವಾಗಿದೆ. ಸುದ್ದಿ ಮನೋರಂಜನೆ, ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಸಿದ್ದಗೊಂಡಿದ್ದು, ಕಾರಾಗೃಹ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.