ETV Bharat / city

ದತ್ತ ಪೀಠ ಕುರಿತ ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಮುತಾಲಿಕ್ - ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ

ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ನೇಮಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿರುವುದು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

Pramod muthalik reaction on HC order of datta peeta
ದತ್ತ ಪೀಠ ಕುರಿತು ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಮುತಾಲಿಕ್
author img

By

Published : Sep 29, 2021, 2:49 AM IST

ಧಾರವಾಡ: ದತ್ತ ಪೀಠಕ್ಕಾಗಿ 20 ವರ್ಷದಿಂದ ಹೋರಾಟ ನಡೆಸಿದ್ದೇವೆ. ಇದು ದತ್ತಾತ್ರೇಯ ತಪಸ್ಸು ಮಾಡಿದ ಪವಿತ್ರ ಕ್ಷೇತ್ರ, ಪೌರಾಣಿಕ, ಐತಿಹಾಸಿಕ ದಾಖಲೆಗಳೆಲ್ಲವೂ ಇದ್ದವು. ಹೀಗಾಗಿ ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ನೇಮಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿರುವುದು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ದತ್ತ ಪೀಠ ಕುರಿತು ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಮುತಾಲಿಕ್

ಈ ಕುರಿತು ನಗರದಲ್ಲಿ ಮಾತನಾಡಿರುವ ಅವರು, ಇನಾಮ್ ದತ್ತಪೀಠ ಎಂದು ಸರ್ಕಾರದ ದಾಖಲೆಯಲ್ಲಿತ್ತು. ಇಷ್ಟೆಲ್ಲ ಇದ್ದಾಗಲೂ ಮುಸ್ಲಿಂರು ಅತಿಕ್ರಮಣ ಮಾಡಿದ್ದರು. ಕಾಂಗ್ರೆಸ್‌ನವರೇ ಮೌಲ್ವಿ ಕೈಯಲ್ಲಿ ಪೀಠ ಕೊಟ್ಟಿದ್ದರು. ಈಗ ಕಾಂಗ್ರೆಸ್‌ನ ಆ ಸಮಿತಿ ಮಾಡಿದ್ದ ನೇಮಕವನ್ನೇ ಕೋರ್ಟ್ ರದ್ದು ಮಾಡಿರುವುದು ಸ್ವಾಗತಾರ್ಹ ತೀರ್ಪು ಎಂದಿದ್ದಾರೆ.

ಇದು ಕಾಂಗ್ರೆಸಗೆ ಆಗಿರುವ ಮುಖಭಂಗ. ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕೂಡಲೇ‌ ಹಿಂದೂ ಆರ್ಚಕರನ್ನು ನೇಮಕ ಮಾಡಬೇಕು. ಹಿಂದೂ ದತ್ತ ಪೀಠ ಅಂತಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.