ಹುಬ್ಬಳ್ಳಿ: ಕೊರೊನಾ ಸೋಂಕಿತರ ಮನೆಯನ್ನು ಹಾಗೂ ಓಣಿಯನ್ನು ಸೀಲ್‌ಡೌನ್ ಮಾಡುತ್ತಿದ್ದ ಹು-ಧಾ ಮಹಾನಗರ ಪಾಲಿಕೆ ಎರಡನೇ ಅಲೆ ವೇಳೆ ರೆಡ್ ಟೇಪ್ ಹಚ್ಚುವ ಕಾರ್ಯವನ್ನು ಕೈಗೊಂಡಿತ್ತು.
ಈಗ ಮತ್ತೊಂದು ವಿನೂತನ ನಿರ್ಧಾರವನ್ನು ಕೈಗೊಂಡಿದ್ದು, ಕೊರೊನಾ ಸೋಂಕು ದೃಢಪಟ್ಟು ಮನೆಯಲ್ಲಿ ಆರೈಕೆಯಲ್ಲಿರುವವರ (ಹೋಮ್ ಐಸೊಲೇಶನ್) ಮನೆಗೆ ಪೋಸ್ಟರ್ ಹಚ್ಚಲು ಮುಂದಾಗಿದೆ. ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾದರಿಯಂತೆ ಹು-ಧಾ ಮಹಾನಗರ ಪಾಲಿಕೆ ಕೂಡ ಸೋಂಕಿತರ ಮನೆ ಬಾಗಿಲಿಗೆ ಪೋಸ್ಟರ್ ಹಚ್ಚಲು ಮುಂದಾಗಿದೆ. ಇದರಿಂದ ಸೋಂಕಿತರ ಇರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಅವರು ಮನೆಯಿಂದ ಹೊರ ಬರದಂತೆ ತಡೆಯಲು ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಅಲ್ಲದೇ ಪ್ರತ್ಯೇಕ ತ್ಯಾಜ್ಯ ಸಂಗ್ರಹಣೆಗೆ ಇದು ಪೂರಕವಾಗಲಿದೆ. ಎ-4 ಸೈಜಿನ ಪೋಸ್ಟರ್ ಹಚ್ಚಲು ಪಾಲಿಕೆ ನಿರ್ಧರಿಸಿದ್ದು, ಈಗಾಗಲೇ ಹು-ಧಾ ಮಹಾನಗರದಲ್ಲಿ ಸುಮಾರು ಮನೆಗಳನ್ನು ಗುರುತಿಸಿದೆ.
ಇನ್ನೂ ಕೊರೊನಾ ಸೋಂಕಿತರು ಮನೆಯಲ್ಲಿ ಆರೈಕೆಗೆ ಇರಬೇಕಾಗುತ್ತದೆ. ಬಳಿಕ ಗುಣಮುಖರಾಗಿರುವವರ ಮನೆಯಿಂದ ಈ ಪೋಸ್ಟರ್ ತೆಗೆದುಹಾಕಲಾಗುತ್ತದೆ. ಸೋಂಕಿತರ ಮನೆ ಹಾಗೂ ಏರಿಯಾವನ್ನು ಸೀಲ್‌ಡೌನ್ ಮಾಡುವ ಬದಲು ಈ ಒಂದು ನಿರ್ಧಾರವನ್ನು ಹು-ಧಾ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.
ಇದನ್ನೂ ಓದಿ: 28 ವಿದ್ಯಾರ್ಥಿಗಳು ಸೇರಿ 30 ಮಂದಿಗೆ ಕೊರೊನಾ.. ಕುಸುಗಲ್ ಪ್ರೌಢಶಾಲೆ ಸೀಲ್‍ಡೌನ್