ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಿಗೆ ಸಂಚಾರಿ ಪೋಲಿಸರು ದಂಡ ಹಾಕಿದ ಘಟನೆ ನಗರದಲ್ಲಿ ನಡೆದಿದೆ.
ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಗದಗ ಮಾರ್ಗದಲ್ಲಿ ಶಿರಡಿ ಸಾಯಿ ಬಾಬಾ ಗುಡಿ ಹತ್ತಿರ, ವಿಜಯಪುರ ಮಾರ್ಗವಾಗಿ ಹೋಗುವವರಿಗೆ ಕೋರ್ಟ್ ವೃತ್ತದ ಪೆಟ್ರೋಲ್ ಪಂಪ್ ಹತ್ತಿರ ಅವಕಾಶ ಕಲ್ಪಿಸಲಾಗಿದೆ. ಆದರೂ ಸಹಿತ ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ನೋ ಪಾರ್ಕಿಂಗ್ ಇದ್ದರು ಕೂಡಾ ಬಸ್ಸಿನ ಚಾಲಕರು ರಸ್ತೆಯ ಮಧ್ಯೆಯೇ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು.
ಇದರಿಂದ ಮೊದಲೇ ಜನದಟ್ಟಣೆ ಇರುವ ಪ್ರದೇಶದಲ್ಲಿ ಮತ್ತಷ್ಟು ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಬಗ್ಗೆ ಸಂಚಾರಿ ಪೊಲೀಸರು ಎಷ್ಟೋ ಬಾರಿ ಬಸ್ಸಿನ ಚಾಲಕ, ನಿರ್ವಹಕರಿಗೆ ತಿಳಿಸಿದರೂ ಕೂಡಾ ಚಾಲಕರು ಕ್ಯಾರೆ ಎನ್ನುತ್ತಿರಲಿಲ್ಲ. ಇದರಿಂದ ರೋಸಿ ಹೋದ ಪೋಲಿಸರು ಇಂದು ಬಸ್ಸುಗಳಿಗೆ ಕೋರ್ಟ್ ನೊಟೀಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ.
ಇನ್ನು, ಈ ವೇಳೆ ಸಂಚಾರಿ ಪೊಲೀಸರು ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿ ನಡುವೆ ವಾಗ್ದಾದ ಕೂಡ ನಡೆಯಿತು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಬಸ್ಸಿನ ಚಾಲಕರಿಗೆ ತಿಳುವಳಿಕೆ ಹೇಳಿ, ನೊಟೀಸ್ ಕೊಟ್ಟು ಕಳಿಸಿದರು.
(ಇದನ್ನೂ ಓದಿ: Watch : ಹೈದರಾಬಾದ್ ICRISAT ಕ್ಯಾಂಪಸ್ ತೋಟದಲ್ಲಿ ಕಡಲೆ ತಿಂದ ನಮೋ..)