ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಈಗಾಗಲೇ ಮೃತರ ಸಂಖ್ಯೆ 15ಕ್ಕೇರಿದೆ. ಈ ನಡುವೆ ದೊರಕಿರುವ ಶವಗಳ ಪೋಸ್ಟ್ ಮಾರ್ಟಮ್ ಮಾಡುವಲ್ಲಿ ವೈದ್ಯರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ರೊಚ್ಚಿಗೆದ್ದಿದ್ದಾರೆ.
ನಿನ್ನೆ ಸಂಜೆ ಏಳು ಗಂಟೆಗೆ ಬಂದ ಶವಗಳನ್ನಿಟ್ಟುಕೊಂಡು ಇದುವರೆಗೂ ರಿಪೋರ್ಟ್ ನೀಡಿಲ್ಲ. ಅಲ್ಲದೆ ಪೋಸ್ಟ್ ಮಾರ್ಟಮ್ ಮುಗಿಸಿ ಶವ ಹಿಂತಿರುಗಿಸಿಲ್ಲ ಎಂದು ಪೊಲೀಸ್ ಮತ್ತು ಜಿಲ್ಲಾಸ್ಪತ್ರೆ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮೃತರ ಸಂಬಂಧಿಕರನ್ನು ಜಿಲ್ಲಾಸ್ಪತ್ರೆ ಹಾಗೂ ಪೊಲೀಸ್ ಸಿಬ್ಬಂದಿ ಸಮಾಧಾನ ಪಡಿಸಲು ಮುಂದಾದರು.