ETV Bharat / city

ಬಿಆರ್​ಟಿಎಸ್ ಬಸ್​ನಲ್ಲಿ ಎಸಿ ಇಲ್ಲವೆಂದು ಪ್ರಯಾಣಿಕರ ಆಕ್ರೋಶ.. - Hubli- Dharwad

ರಾಜ್ಯದ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಸಂಚರಿಸುತ್ತಿರುವ ಬಿಆರ್​ಟಿಎಸ್ ಬಸ್‌ಗಳು ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಆಗುತ್ತಲೇ ಇವೆ. ಇಂದು ಬಸ್​ನಲ್ಲಿ ಎಸಿ ಇಲ್ಲವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಬಸ್​ನಲ್ಲಿ ಎಸಿ ಇಲ್ಲವೆಂದು ಪ್ರಯಾಣಿಕ ಆಕ್ರೋಶ
author img

By

Published : Aug 3, 2019, 6:48 PM IST

ಹುಬ್ಬಳ್ಳಿ: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬಸ್​ನಲ್ಲಿ ಎಸಿ ಇಲ್ಲವೆಂದು ಆರೋಪಿಸಿ ಪ್ರಯಾಣಿಕರೊಬ್ಬರು ಚಿಗರಿ ಬಸ್ ಡ್ರೈವರ್‌ನ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ - ಧಾರವಾಡದ ಮಧ್ಯೆ ಸುಗಮ ಸಂಚಾರ ಸೇರಿದಂತೆ ಶೀಘ್ರ ಪ್ರಯಾಣದ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಗರಕ್ಕೆ ಬಿಆರ್​ಟಿಎಸ್ ಯೋಜನೆಯನ್ನು ತರಲಾಗಿದೆ. ಈ ಮೂಲಕ ಅತ್ಯುತ್ತಮ ಹವಾನಿಯಂತ್ರಿತ ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿತ್ತು. ಆದರೆ, ಇದೀಗ ಈ ಬಸ್‌ಗಳು ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳ ಸುರಿಮಾಲೆಯಲ್ಲಿ ಸಿಲುಕಿಕೊಳ್ಳುತ್ತಿದ್ದು, ಇಂದು ಹವಾನಿಯಂತ್ರಿತ ಬಸ್ಸಿನಲ್ಲೇ ಎಸಿ ಕೈಕೊಟ್ಟ ಕಾರಣ ಎಸಿ ಇಲ್ಲದೇ ಸಂಚಾರ ನಡೆಸುವಂತಾಯಿತು. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.

ಬಸ್​ನಲ್ಲಿ ಎಸಿ ಇಲ್ಲವೆಂದು ಪ್ರಯಾಣಿಕ ಆಕ್ರೋಶ..

ಎಸಿ ಇಲ್ಲವೆಂದು ಪ್ರಯಾಣಿಕರೊಬ್ಬರು ಡ್ರೈವರ್​ಗೆ ಕೇಳಿದರೆ, ಪ್ರಯಾಣಿಕರು ಜಾಸ್ತಿಯಾದ್ರೆ ಎಸಿ ರಿಯಾಕ್ಟ್​ ಆಗುತ್ತೆ. ಹೀಗಾಗಿ ನಿಮಗೆ ಎಸಿ ಇರೋದು ಗೊತ್ತಾಗುವುದಿಲ್ಲ. ಸುಮ್ಮನೆ ಏನೇನೋ ಹೇಳಬೇಡಿ. ಎಸಿ ಇಲ್ಲಂದ್ರೆ ಬಸ್ ಆನ್ ಆಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಇಂತಹ ಬಸ್‌ಗಳಲ್ಲೇ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತಿದ್ದು, ಇದಕ್ಕೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Intro:ಹುಬ್ಬಳಿ: ಸ್ಟ್ರಿಂಜರ್ Body:ಸ್ಲಗ್: ಬಿ.ಆರ್.ಟಿ.ಸಿ.( ಚಿಗರಿ) ಎ.ಸಿ.ಇಲ್ಲವೆಂದು ಪ್ರಯಾಣಿಕ ಡ್ರೈವರ್ ವಿರುದ್ಧ ಆಕ್ರೋಶ...

ಹುಬ್ಬಳ್ಳಿ:- ಅವಳಿನಗರದಲ್ಲಿ ಸಂಚರಿಸುತ್ತಿರುವ ಬಿಆರ್ ಟಿಎಸ್ ಬಸ್ಸುಗಳು ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಆಗುತ್ತಲೇ ಇದು, ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬಸ್ ನಲ್ಲಿ ಎಸಿ ಇಲ್ಲವೆಂದು ಆರೊಪಿಸಿ ಪ್ರಯಾಣಿಕರೊಬ್ಬರು ಚಿಗರಿ ಬಸ್ ಡ್ರೈವರಗೆ ತರಾಟೆ ತೆಗೆದುಕೊಂಡ ಘಟನೆ ಹುಬ್ಬಳಿಯಲ್ಲಿ ನಡೆದಿದೆ.....

ಹುಬ್ಬಳ್ಳಿ - ಧಾರವಾಡದ ಮಧ್ಯೆ ಸುಗಮ ಸಂಚಾರ ಸೇರಿದಂತೆ ಶೀಘ್ರ ಪ್ರಯಾಣಿಕರ ರವಾನೆ ಉದ್ದೇಶದಿಂದ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಗರಕ್ಕೆ ಬಿಆರ್ ಟಿಎಸ್ ಯೋಜನೆಯನ್ನು ತಂದಿದೆ. ಅಲ್ಲದೇ ಅತ್ಯುತ್ತಮ ಹವಾನಿಯಂತ್ರಿತ ಬಸ್ಸುಗಳನ್ನು ರಸ್ತೆಗೆ ಇಳಿಸಿತ್ತು. ಆದರೆ, ಇದೀಗ ಅತ್ಯುತ್ತಮ ಬಸ್ಸುಗಳು ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳ ಸುರಿಮಾಲೆಯಲ್ಲಿ ಸಿಲುಕಿಕೊಳ್ಳುತ್ತಿದ್ದು, ಇಂದು ಹವಾನಿಯಂತ್ರಿತ ಬಸ್ಸನಲ್ಲೇ ಎಸಿ ಕೈಕೊಟ್ಟ ಕಾರಣ ಎಸಿ ಇಲ್ಲದೇ ಸಂಚಾರ ನಡೆಸುವಂತಾಗಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.ಇನ್ನೂ ಎಸಿ ಇಲಲ್ಲವೆಂದು ಪ್ರಯಾಣಿಕರೊಬ್ಬರು ಎಸಿ ಡ್ರೈವರ್ ಗೆ ಕೇಳಿದ್ರೇ ಪ್ರಯಾಣಿಕರು ಜಾಸ್ತಿಯಾದ್ರೇ ಎಸಿ ರಿಯ್ಯಾಟ್ ಆಗುತ್ತೆ ಹೀಗಾಗಿ ನಿಮಗೆ ಎ.ಸಿ ಇರೋದು ಗೊತ್ತು ಆಗುವುದಿಲ್ಲ,ಸುಮ್ಮನೆ ಏನೆನೋ ಹೇಳಬೇಡಿ ಎ.ಸಿ.ಇಲ್ಲಂದ್ರೆ ಬಸ್ ಆನ್ ಅಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ...ಆದ್ರೆ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರತ್ಯೇಕ ಕಾರಿಡಾರ್, ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಿದೆ ಆದರೆ ಇಂತಹ ಬಸ್ಸುಗಳಲ್ಲೇ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತಿದ್ದು, ಇದಕ್ಕೆ ಯಾರು಼ಸ ಜವಾಬ್ದಾರಿ ಎಂದು ಆರೋಪಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ...!

_________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ‌ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.