ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆ ಯಿಂದ ಮಾಸ್ಕ್ ಪ್ಯಾಕೆಟ್ ಕಳ್ಳತನ ಮಾಡಿದ ನರ್ಸ್ ವೊಬ್ಬರಿಗೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ನೋಟಿಸ್ ನೀಡಿದ್ದಾರೆ.
ಕಿಮ್ಸ್ ಸಿಬ್ಬಂದಿ ಫಾತಿಮಾ ಸೈಯದ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಮೇಲಧಿಕಾರಿಗಳ ಅನುಮತಿಯಿಲ್ಲದೇ ಫಾತಿಮಾ ಮುಖ್ಯ ಔಷಧಾಲಯದಿಂದ 100 ಮಾಸ್ಕ್ ಇದ್ದ ಪ್ಯಾಕೆಟ್ ತಗೆದುಕೊಂಡು ಹೋಗಿದ್ದರು.

ಈ ಬಗ್ಗೆ ಕಿಮ್ಸ್ ಅಧಿಕಾರಿಗಳು ಪ್ರಶ್ನಿಸಿದರೆ ಇಲ್ಲ ಎಂದಿದ್ದರು. ಆದರೆ ಸಿಸಿಟಿವಿಯಲ್ಲಿ ಫಾತಿಮಾ ಪ್ಯಾಕೆಟ್ ತಗೆದುಕೊಂಡು ಹೋಗುವುದು ಸೆರೆಯಾಗಿದೆ. ಹೀಗಾಗಿ ಕಾರಣ ಕೇಳಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ನೋಟಿಸ್ ನೀಡಿದ್ದಾರೆ.