ಹುಬ್ಬಳ್ಳಿ: ನರಗುಂದ ಬಂಡಾಯ ಸಿನಿಮಾ ಇದೇ ಮಾ. 12 ಕ್ಕೆ ರಾಜ್ಯಾದೆಲ್ಲೆಡೆ ಬಿಡುಗಡೆಯಾಗಲಿದೆ ಎಂದು ನಟ ರಕ್ಷ್ ತಿಳಿಸಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನರಗುಂದ ಬಂಡಾಯ ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಕ್ರಾಂತಿಕಾರಿ ಹೋರಾಟದ ನೈಜತೆಯ ಪ್ರತಿರೂಪ. ಹೋರಾಟದ ರೂವಾರಿ ವೀರಪ್ಪ ಕಡ್ಲಿ ಅವರ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. ಇತಿಹಾಸ ಪುಟ ಸೇರಿದ ನಾಯಕನ ಪಾತ್ರದಲ್ಲಿ ನಾನು ಅಭಿನಯಿಸುತ್ತಿರುವುದು ಹೆಮ್ಮೆಯ ಸಂಗತಿ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ನಟಿ ಶೂಭಾ ಪುಂಜಾ, ನನಗೂ ಉತ್ತರ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. 'ನರಗುಂದ ಬಂಡಾಯ' ಚಿತ್ರದಲ್ಲಿ ಹೋರಾಟಗಾರ್ತಿ ಆಗಿ ಪಾತ್ರ ನಿಭಾಯಿಸಿದ್ದೇನೆ. ಚಿತ್ರೀಕರಣ ಸಂದರ್ಭದಲ್ಲಿ ಸುಡು ಬಿಸಿಲು ನೋಡದೇ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ನರಗುಂದ ಬಂಡಾಯ ಇತಿಹಾಸ ಸೃಷ್ಟಿಸುವ ಸಿನಿಮಾ ಆಗಿದೆ ಎಂದರು.