ETV Bharat / city

ಕಮಿಷನ್‌ ಮತ್ತು ಕಾಂಗ್ರೆಸ್‌ ಒಟ್ಟಿಗೆ ಹುಟ್ಟಿದ್ದು.. ಸಚಿವ ಸುನೀಲ್ ಕುಮಾರ್ ಆರೋಪ - sunil kumar on dingaleshwara statement

ಆರೋಪಗಳನ್ನು ಮಾಡುವವರು ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೊಟ್ಟರೆ ನಾನು ತನಿಖೆ ಮಾಡಿಸುತ್ತೇನೆಂದು ಈಗಾಗಲೇ ಸಿಎಂ ಹೇಳಿದ್ದಾರೆ. ಸ್ವಾಮೀಜಿಗಳ ಬಗ್ಗೆ ನಮಗೆ ವಿಶೇಷ ಗೌರವವಿದೆ. ಹೀಗಾಗಿ, ಯಾವುದನ್ನು ನೀವು ಬಹಿರಂಗವಾಗಿ ಹೇಳಿದ್ರೋ, ಆ ಬಗ್ಗೆ ದಾಖಲೆಗಳನ್ನೂ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನೀವು ಬಹಿರಂಗವಾಗಿ ಕೊಡಬೇಕು. ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು..

minister sunil kumar
ಸಚಿವ ಸುನೀಲ್ ಕುಮಾರ್
author img

By

Published : Apr 19, 2022, 5:30 PM IST

ಬಾಗಲಕೋಟೆ : ಸಿದ್ದರಾಮಯ್ಯನವರ ಅವಧಿಯಲ್ಲಿ ಪಿಎಫ್​ಐ ಸಂಘಟನೆಯ ಒಂದೂವರೆ ಸಾವಿರ ಜನರ ಕೇಸ್ ಅನ್ನು ಹಿಂಪಡೆಯಲಾಯಿತು. ಅಂದು ಬಿತ್ತಿದ ವಿಷ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಆದರೆ, ನಮ್ಮ ಅಧಿಕಾರಿಗಳು 24 ಗಂಟೆಯಲ್ಲಿ ಅಶಾಂತಿಯ ವಾತಾವರಣವನ್ನು ಹದ್ದುಬಸ್ತಿಗೆ ತಂದಿದ್ದಾರೆಂದು ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಕೆಲವರು ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದ್ರೆ, ಸರ್ಕಾರವೇನು ಕೈಕಟ್ಟಿ ಕೂರೋದಿಲ್ಲವೆಂದು ಎಚ್ಚರಿಕೆ ನೀಡಿದರು. 24 ಗಂಟೆಯಲ್ಲಿ 100 ಜನರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದೇವೆ. ಶಾಂತಿಗೆ ಸಹಕರಿಸುತ್ತಿರೋ ಅಥವಾ ಬುಲ್ಡೋಜರ್​ ಕಾರ್ಯಾಚರಣೆಗೆ ಸಹಕರಿಸುತ್ತಿರೋ ಅನ್ನೋದು ಅವರಿಗೆ ಬಿಟ್ಟದ್ದು ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ವಿರುದ್ಧ ಆರೋಪಿಸಿರುವ ಇಂಧನ ಸಚಿವ ಸುನೀಲ್ ಕುಮಾರ್..

ದಿಂಗಾಲೇಶ್ವರ ಶ್ರೀಗಳ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕಮಿಷನ್ ಮತ್ತು ಕಾಂಗ್ರೆಸ್ ಎರಡೂ ಒಟ್ಟಿಗೆ ಹುಟ್ಟಿದ್ದು. ಕಾಂಗ್ರೆಸ್ ಎಲ್ಲಿಯವರೆಗೆ ಬೆಳೆಯುತ್ತೋ ಅಲ್ಲಿಯವರೆಗೆ ಕಮಿಷನ್ ದಂಧೆ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ. ಕಮಿಷನ್ ಮೂಲಕ ಇಡೀ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್​ಗೆ ಸಲ್ಲುತ್ತದೆ ಎಂದು ಟಾಂಗ್ ನೀಡಿದರು. ಅಲ್ಲದೇ ಅದನ್ನು ಸರಿ ಮಾಡುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಶಾಂತಿ ಕಾಪಾಡುವಂತೆ ಮನವಿ ಮಾಡಲು ಪೊಲೀಸ್ ಜೀಪ್ ಹತ್ತಿದ್ದೆ: ಅಲ್ತಾಫ್ ಹಳ್ಳೂರ ಸ್ಪಷ್ಟನೆ

ಆರೋಪಗಳನ್ನು ಮಾಡುವವರು ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೊಟ್ಟರೆ ನಾನು ತನಿಖೆ ಮಾಡಿಸುತ್ತೇನೆಂದು ಈಗಾಗಲೇ ಸಿಎಂ ಹೇಳಿದ್ದಾರೆ. ಸ್ವಾಮೀಜಿಗಳ ಬಗ್ಗೆ ನಮಗೆ ವಿಶೇಷ ಗೌರವವಿದೆ. ಹೀಗಾಗಿ, ಯಾವುದನ್ನು ನೀವು ಬಹಿರಂಗವಾಗಿ ಹೇಳಿದ್ರೋ, ಆ ಬಗ್ಗೆ ದಾಖಲೆಗಳನ್ನೂ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನೀವು ಬಹಿರಂಗವಾಗಿ ಕೊಡಬೇಕು. ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.