ETV Bharat / city

ಯಾವುದೇ ಖಾತೆ ಕೊಟ್ಟರೂ ಚೆನ್ನಾಗಿ ನಿರ್ವಹಿಸುತ್ತೇನೆ: ಮುರುಗೇಶ್ ನಿರಾಣಿ - ಹುಬ್ಬಳ್ಳಿ ಲೇಟೆಸ್ಟ್​ ನ್ಯೂಸ್

ನನಗೆ ಇಂತಹದ್ಧೇ ಖಾತೆ ಬೇಕು ಅಂತ ಏನು ಇಲ್ಲ. ಯಾವುದನ್ನು ಕೊಟ್ಟರೂ ಸರಿಯಾಗಿ ನಿರ್ವಹಣೆ ಮಾಡುತ್ತೇನೆ. ಎಲ್ಲರೂ ಬಿಟ್ಟಿರುವ ಖಾತೆಯನ್ನು ನನಗೆ ಕೊಟ್ಟರೂ ನಿರ್ವಹಿಸುತ್ತೇನೆ ಎಂದು ಸಚಿವ ಮುರಗೇಶ್ ನಿರಾಣಿ ಹೇಳಿದ್ದಾರೆ.

Minister Muragesh Nirani
ಸಚಿವ ಮುರಗೇಶ್ ನಿರಾಣಿ
author img

By

Published : Aug 7, 2021, 11:31 AM IST

ಹುಬ್ಬಳ್ಳಿ: ರಾಜ್ಯದಲ್ಲಿ ನೂತನ ಮಂತ್ರಿಮಂಡಲ ರಚನೆಯಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಮೇಲೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಮತ್ತು ಶಂಕರ ಪಾಟೀಲ ಮುನೇನಕೊಪ್ಪ ಇಬ್ಬರೂ ಮುಂಬರುವ ದಿನಗಳಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತೇವೆ ಎಂದು ನೂತನ ಸಚಿವ ಮುರಗೇಶ್ ನಿರಾಣಿ ಹೇಳಿದರು.

ಎಲ್ಲರೂ ಬಿಟ್ಟಿರುವ ಖಾತೆಯನ್ನು ಕೊಟ್ಟರೂ ಚೆನ್ನಾಗಿ ನಿರ್ವಹಿಸುತ್ತೇನೆ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನೂತನವಾಗಿ ಮಂತ್ರಿಮಂಡಲ ರಚನೆಯಾಗಿದೆ. ಸನ್ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸಿಎಂ ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಆದಷ್ಟು ಬೇಗನೇ ಈ ಭಾಗದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಖಾತೆ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಇಂತಹದ್ದೇ ಖಾತೆ ಬೇಕು ಅಂತ ಏನು ಇಲ್ಲ. ಯಾವುದನ್ನು ಕೊಟ್ಟರೂ ಸರಿಯಾಗಿ ನಿರ್ವಹಣೆ ಮಾಡುತ್ತೇನೆ. ಎಲ್ಲರೂ ಬಿಟ್ಟಿರುವ ಖಾತೆಯನ್ನು ಕೊಟ್ಟರೂ ಚೆನ್ನಾಗಿ ನಿರ್ವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪಾಂಡವಪುರ ಬೇಬಿ ಬೆಟ್ಟದ ನಿಷೇಧಿತ ಪ್ರದೇಶದಲ್ಲಿ ಸ್ಫೋಟಕಗಳು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.