ಧಾರವಾಡ: ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.
ಧಾರವಾಡದ ಚನ್ನಬಸವೇಶ್ವರ ನಗರ, ಗರಗ ಮತ್ತು ತಡಕೊಡ ಮಧ್ಯದ ತುಪ್ಪರಿ ಹಳ್ಳವನ್ನು ಸಚಿವ ಜಗದೀಶ ಶೆಟ್ಟರ್ ವೀಕ್ಷಣೆ ಮಾಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದು, 15 ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಶೆಟ್ಟರ್, ಸಮಸ್ಯೆ ಬಗೆಹರಸುವುದಾಗಿ ಭರವಸೆ ನೀಡಿದರು.