ಕಲಘಟಗಿ/ಹುಬ್ಬಳ್ಳಿ : ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ರೈತನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ (35) ಎಂಬಾತ ಮೃತ ರೈತ. ಹೊಲಕ್ಕೆ ಹೋಗುವ ಬರದಲ್ಲಿ ರೈತ ಯಲ್ಲಪ್ಪ ಟೀ ಮಾಡಿಕೊಳ್ಳುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ.
ಸಿಲಿಂಡರ್ ಸ್ಫೋಟದಿಂದ ಮನೆ ಹೆಂಚುಗಳು ಹಾರಿ ಹೋಗಿವೆ. ಮನೆಯಲ್ಲಿನ ವಸ್ತುಗಳು ಸಹ ಹಾನಿಯಾಗಿವೆ. ಅಲ್ಲದೇ ಮನೆ ಹೊರಗಡೆ ನಿಂತಿದ್ದ ಬಾಲಕಿ ತಲೆ ಮೇಲೆ ಹೆಂಚುಗಳು ಬಿದ್ದು ಸಣ್ಣಪುಟ್ಟ ಗಾಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
![explosion of cooking gas cylinder](https://etvbharatimages.akamaized.net/etvbharat/prod-images/12784032_thumb.jpg)
ಘಟನಾ ಸ್ಥಳಕ್ಕೆ ಕಲಘಟಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.