ಹುಬ್ಬಳ್ಳಿ : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದು ಸೂಪರಿಂಡೆಂಟ್ ಇಂಜಿನಿಯರ್ ಸಾವಿಗೀಡಾದ ಘಟನೆ ಭಾನುವಾರ ತಡರಾತ್ರಿ ನಗರದ ಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.
ರೈಲು ಇಳಿಯಲು ಹೋಗಿ ಇಂಜಿನಿಯರ್ ಸಾವು : ಬೆಂಗಳೂರು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಂಗರಾಜು ಎಸ್.ಎ ಮೃತರು.
ನಿನ್ನೆ ರಾತ್ರಿ ಹುಬ್ಬಳ್ಳಿ – ಬೆಂಗಳೂರು ರೈಲಿಗೆ ಹತ್ತಬೇಕಿತ್ತು. ಆದರೆ ಬೆಳಗಾವಿ- ಬೆಂಗಳೂರು ರೈಲಿಗೆ ಹತ್ತಿದ್ದರು. ನಂತರ ತಿಳಿದು ಕೂಡಲೇ ಇಳಿಯಲು ಯತ್ನಿಸಿದ್ದಾರೆ. ಆಗ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.