ಹುಬ್ಬಳ್ಳಿ : ಹಳೆ ಹುಬ್ಬಳ್ಳಿಯ ಘಟನೆ ಪೂರ್ವ ನಿಯೋಜಿತ. ನಾನು ಹು-ಧಾ ಕಮಿಷನರ್ ಅವರನ್ನು ಭೇಟಿಯಾಗಿ 150ಕ್ಕೂ ಹೆಚ್ಚು ಜನರ ಬಂಧನವಾದ ಮಾಹಿತಿ ಪಡೆದಿದ್ದೇನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ಹಳೆ ಹುಬ್ಬಳ್ಳಿ ದಿಡ್ಡಿ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 4ರಿಂದ 5ಸಾವಿರ ಜನ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರನ್ನು ಬಂಧಿಸುವ ಕಾರ್ಯವಾಗಬೇಕು ಎಂದರು.
ಈಗಾಗಲೇ ಅನೇಕ ಜನ ಊರು ಬಿಟ್ಟು ಹೋಗಿದ್ದಾರೆ. ತಪ್ಪು ಮಾಡಿಲ್ಲ ಎಂದ ಮೇಲೆ ಯಾಕೆ ಹೋಗಬೇಕು?. ಅಮಾಯಕರನ್ನ ಬಂಧಿಸಬೇಡಿ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಹಾಗಿದ್ದರೆ, ಆರೋಪಿಗಳು ಯಾರು ಎಂದು ಅವರೇ ಸ್ಪಷ್ಟಪಡಿಸಲಿ. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ನಾನು ವ್ಯಸ್ತನಾಗಿದ್ದರಿಂದ ಈ ಘಟನಾ ಸ್ಥಳಕ್ಕೆ ಭೇಟಿ ನೀಡಲು ತಡವಾಗಿದೆ.
ಆದಷ್ಟು ಬೇಗ ಪೊಲೀಸರು ಆರೋಪಿ ವಾಸೀಂ ಪಠಾಣ್‌ನ ವಿಚಾಪರಣೆ ಮಾಡಿ ಸತ್ಯಾಸತ್ಯತೆಯನ್ನ ತಿಳಿಸಬೇಕಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ : ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಸಂಚು ಬಹಿರಂಗ