ETV Bharat / city

ಹುಬ್ಬಳ್ಳಿಯಲ್ಲಿ ಲಾಕ್​ಡೌನ್​ ನಡುವೆಯೂ ಮಾರಾಟ: 40 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ವಶ

ಲಾಕ್​​ಡೌನ್​ ಜಾರಿಯಾಗಿರುವುದರಿಂದ ಮದ್ಯದಂಗಡಿ ತೆರೆಯದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಮಧ್ಯೆ ಹೆಚ್ಚಿನ ಲಾಭ ಮಾಡುವ ಉದ್ದೇಶದಿಂದ ಹುಬ್ಬಳ್ಳಿಯ ಕೆಲ ಮಾಲೀಕರು ಅಂಗಡಿ ತೆರದು ನಾಲ್ಕು ಪಟ್ಟು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

Liquor sales in amid lockdown: Excise department raids
ಲಾಕ್​ಡೌನ್​ ನಡುವೆಯೇ ಮದ್ಯ ಮಾರಾಟ: ಅಬಕಾರಿ ಇಲಾಖೆ ದಿಢೀರ್ ದಾಳಿ
author img

By

Published : Apr 17, 2020, 6:06 PM IST

ಹುಬ್ಬಳ್ಳಿ/ಧಾರವಾಡ: ಲಾಕ್​​ಡೌನ್ ಆದೇಶ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರು ದಿಢೀರ್​ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಹಲವು ಕಡೆ ಅಬಕಾರಿ ಇಲಾಖೆ ದಾಳಿ ನೆಡೆಸಿದೆ. ನಾಲ್ಕು ಪಟ್ಟು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಸುಮಾರು 40 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ಲಾಕ್​ಡೌನ್​ ನಡುವೆಯೇ ಮದ್ಯ ಮಾರಾಟ: ಹುಬ್ಬಳ್ಳಿಯಲ್ಲಿ ಅಬಕಾರಿ ಇಲಾಖೆ ದಾಳಿ

ಅಬಕಾರಿ ಇನ್ಸ್​​ಪೆಕ್ಟರ್ ಸಂಜೀವ ರೆಡ್ಡಿ ನೇತೃತ್ವದಲ್ಲಿ ತೇಜ್ ವೈನ್ಸ್ ಸೇರಿದಂತೆ ವಿವಿಧ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಲಾಕ್​​ಡೌನ್ ಇದ್ದರೂ ಅಂಗಡಿ ತೆರೆದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗಡಿ ವಿರುದ್ಧ ಹಾಗೂ ಮಾಲೀಕರಿಗೆ ಅಬಕಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ತೇಜ್ ವೈನ್ಸ್ ಅಂಗಡಿ ಲೈಸನ್ಸ್ ರದ್ದು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.