ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿರುವ ನೆಹರೂ ಕ್ರೀಡಾಂಗಣ ಸರಿಯಾದ ನಿರ್ವಹಣೆ ಇಲ್ಲದೆ ಕಸದ ಗುಂಡಿಯಾಗಿದೆ. ಮಹಾನಗರ ಪಾಲಿಕೆ ಸುಪರ್ದಿಗೆ ಬರುವ ನೆಹರೂ ಕ್ರೀಡಾಂಗಣ ತನ್ನದೇಯಾದ ಮಹತ್ವ ಹೊಂದಿದೆ.
ವಾಣಿಜ್ಯ ನಗರಿಯಲ್ಲಿ ನಡೆಯುವ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಇದು ವೇದಿಕೆಯಾಗಿದೆ. ಆದ್ರೆ ಈಗ ಇದೇ ಕ್ರೀಡಾಂಗಣ ಸರಿಯಾದ ನಿರ್ವಹಣೆ ಕೊರತೆಯಿಂದ ಕಸದ ಗುಂಡಿಯಂತಾಗುತ್ತಿದೆ.
ಮಳೆ ಬಂದ್ರೆ ಸಾಕು ಕ್ರೀಡಾಂಗಣದ ತುಂಬಾ ನೀರು ತುಂಬಿಕೊಂಡು ಕೆರೆಯಂತಾಗುತ್ತದೆ. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ನೀರು ಆವರಣದಲ್ಲಿ ನಿಂತುಕೊಳ್ಳುತ್ತದೆ.
ಆವರಣದಲ್ಲಿ ಎಲ್ಲೆಂದರಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವುದು ವಾಣಿಜ್ಯ ನಗರಿಯ ಪ್ರಜ್ಞಾವಂತ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಕ್ರೀಡಾಂಗಣವನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಒತ್ತಾಯಿಸಿದ್ದಾರೆ.