ಹುಬ್ಬಳ್ಳಿ: ರಾಜ್ಯದ 25 ಸಂಸದರು ಇಲ್ಲಿ ಹುಲಿಗಳಂತೆ ಘರ್ಜನೆ ಮಾಡ್ತಾರೆ. ನರೇಂದ್ರ ಮೋದಿ ಮುಂದೆ ಹೋದರೆ ಇಲಿಗಳಾಗ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಆರ್. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಇನ್ನೂ ಹಲವು ನಾಯಕರು ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದರು.
ಇನ್ನು, ನೆರೆಯಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಕೇಂದ್ರದಿಂದ ನಯಾಪೈಸೆ ಹಣ ಬಂದಿಲ್ಲ. ರಾಜ್ಯದ 25 ಸಂಸದರು ಇಲ್ಲಿ ಹುಲಿಗಳಂತೆ ಘರ್ಜನೆ ಮಾಡ್ತಾರೆ. ನರೇಂದ್ರ ಮೋದಿ ಮುಂದೆ ಹೋದರೆ ಇಲಿಗಳಾಗ್ತಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: 'ತೆನೆ' ಇಳಿಸಿ 'ಕೈ' ಹಿಡಿದ ಮಧು ಬಂಗಾರಪ್ಪ: ಪಕ್ಷಕ್ಕೆ ಸ್ವಾಗತಿಸಿದ ಕಾಂಗ್ರೆಸ್ ನಾಯಕರು