ಧಾರವಾಡ : ಕೊರೊನಾ ವೈರಸ್‌ನಿಂದ ಕಲಬುರ್ಗಿಯಲ್ಲಿ ವೃದ್ಧನ ಸಾವಾಗಿದೆ. ಸರ್ಕಾರ ಕೇವಲ ರಜೆ ನೀಡುವುದಲ್ಲದೇ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಕಲಬುರ್ಗಿ ಕೊರೊನಾ ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿ ಬೇರೆ ದೇಶದಿಂದ ಬಂದಿದೆ. ಮೊದಲೇ ಸರಿಯಾಗಿ ಚೆಕ್ ಮಾಡಬೇಕಿತ್ತು ಎಂದರು. ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ಒಳ್ಳೆಯದು. ಆದರೆ, ರಜೆ ನೀಡುವುದೊಂದೇ ಆಗದು, ಅದರ ಹೊರತಾಗಿ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.