ಧಾರವಾಡ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಈಗ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಆದರೂ ಜನ ಜಾಗೃತರಾಗಿರಬೇಕು. ಕಿರಾಣಿ ಮತ್ತು ತರಕಾರಿ ಖರೀದಿಗೆ ಸಮಸ್ಯೆಯಾಗಿದ್ದು, ಅದನ್ನು ಬಗೆಹರಿಸಬೇಕು. ನಗರದಾದ್ಯಂತ ವಿಕೇಂದ್ರೀಕರಣ ಮಾಡಿ, ಜನಸಂದಣಿಯಾಗದಂತೆ ವ್ಯವಸ್ಥೆ ಮಾಡಬೇಕು ಎಂದರು.
ತರಕಾರಿ ವ್ಯಾಪಾರಿಗಳಿಗೆ ಪಾಸ್ ಕೊಡಲಾಗುವುದು. ಹೋಮ್ ಡೆಲಿವರಿಯಲ್ಲಿ ದಿನಸಿ ತಲುಪಿಸುವ ವ್ಯವಸ್ಥೆಯೂ ಆಗಲಿದೆ. ಗ್ರಾಮೀಣ ಭಾಗಕ್ಕೂ ಕಿರಾಣಿ ಸಾಮಗ್ರಿ ತಲುಪಿಸಲು ಅನುವು ಮಾಡಿಕೊಡಲಾಗುತ್ತದೆ ಎಂದರು.