ETV Bharat / city

ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಬ್ಯಾಂಕ್​ ಖಾತೆಯಿಂದ 97,500 ರೂ. ವರ್ಗಾಯಿಸಿಕೊಂಡು ವಂಚನೆ ಆರೋಪ

ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದ ನಾಗಪ್ಪ ನರಗುಂದ ಅವರ ಬ್ಯಾಂಕ್​ ಖಾತೆಯಿಂದ ಅಕ್ರಮವಾಗಿ 97,500 ರೂ. ವರ್ಗಾವಣೆ ಆಗಿರುವ ಆರೋಪ ಕೇಳಿಬಂದಿದೆ.

author img

By

Published : Jan 12, 2022, 3:19 PM IST

Hubli fraud case
ಹುಬ್ಬಳ್ಳಿ ವಂಚನೆ ಪ್ರಕರಣ

ಹುಬ್ಬಳ್ಳಿ(ಧಾರವಾಡ): ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ವ್ಯಕ್ತಿಯೊಬ್ಬರ ಖಾತೆಯಿಂದ 97,500 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಆರೋಪದಡಿ ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣಿಗೇರಿ ತಾಲೂಕು ನಲವಡಿ ಗ್ರಾಮದ ನಾಗಪ್ಪ ನರಗುಂದ ವಂಚನೆಗೊಳಗಾದ ಗ್ರಾಹಕ. ಇವರು ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ್‌ನ ಯಾವುದೇ ವಿವರವನ್ನು ಯಾರಿಗೂ ನೀಡಿರಲಿಲ್ಲ. ಯಾವುದೇ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನೂ ಹೊಂದಿರಲಿಲ್ಲ ಎನ್ನಲಾಗ್ತಿದೆ.

ತಾನು ಹೊಂದಿರುವ ಕೆನರಾ ಬ್ಯಾಂಕ್ ಖಾತೆಯಿಂದ ಡಿ. 30ರಿಂದ ಜ. 5ರವರೆಗೆ ಹಣ ಡ್ರಾ ಮಾಡಿಕೊಳ್ಳುವ ಮೂಲಕ ಯಾರೋ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಾರವಾರದಲ್ಲಿ ಲಾರಿ ಹಿಂಬದಿಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.