ಧಾರವಾಡ: ಜಿಲ್ಲೆಯಲ್ಲಿ ಬೀದಿಗಿಳಿದರೆ ಮತ್ತೆ ಲಾಠಿ ಏಟು ಬೀಳಲಿದೆ. ಪೊಲೀಸ್ ಬಲ ಹೆಚ್ಚಾಗಿದೆ. ಲಾಕ್‌ಡೌನ್‌ಗೆ ಜನ ಸ್ಪಂದಿಸದ ಹಿನ್ನೆಲೆ ಪುನಃ ಬಲ ಪ್ರಯೋಗದ ನಿರ್ಧಾರ ಮಾಡಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಜನರಿಂದ ಸಡಲಿಕೆ ಆಗಿರುವ ವಿಚಾರದ ಸಂಬಂಧವಾಗಿಯೇ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಮೊದಲಿನಂತೆ ಬಲ ಪ್ರಯೋಗ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಜನ ಸ್ವಯಂ ಪ್ರೇರಿತವಾಗಿ ಶಾಂತಿ, ಶಿಸ್ತು ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.