ETV Bharat / city

ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು : ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಚಚ್ಚಿ ಕೊಂದ ಪತಿ - The dead woman is Suma from Davanagere

ಮಾ.11ರಂದು ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಬಂದಿತ್ತು. ಈ ಕಾರಣದಿಂದ ವಿಪರೀತವಾಗಿ ಕುಡಿದಿದ್ದ ಗಂಡ ಸುಮಾಳ ತಲೆಗೆ ಅಲ್ಲಿಯೇ ಬಿದ್ದಿರುವ ಕಲ್ಲಿನಿಂದ ಹೊಡೆದಿದ್ದು, ಪರಿಣಾಮ ತೀವ್ರರಕ್ತಸ್ರಾವದಿಂದ ಒದ್ದಾಡುತ್ತಿದ್ದಳು..

Police inspection in spot
ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.
author img

By

Published : Mar 12, 2022, 1:31 PM IST

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಅಕ್ಬರ್ ಮುಲ್ಲಾ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಡೆಯಲ್ಲಿ ನೆತ್ತರು ಹರೆದಿದ್ದು, ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ ಜನರು ಬೆಚ್ಚಿ ಬಿದ್ದಿದ್ದಾರೆ.

ಕ್ಲುಲ್ಲಕ ಕಾರಣಕ್ಕೆ ಪತ್ನಿಯನ್ನು ಚಚ್ಚಿ ಕೊಂದ ಪತಿ..

ಹುಬ್ಬಳ್ಳಿಯ ಕೃಷ್ಣ ಭವನದ ಎದುರಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿದ್ದಾನೆ. ಮೃತ ಮಹಿಳೆ ದಾವಣಗೆರೆ ಮೂಲದ ಸುಮಾ (28) ಎಂದು ಗುರುತಿಸಲಾಗಿದೆ.

ಈಕೆ ಬಳ್ಳಾರಿ ಮ‌ೂಲದ ವ್ಯಕ್ತಿಯನ್ನು ಮದುವೆ ಮಾಡಿಕೊಂಡು ಕಳೆದ ಒಂದು ವರ್ಷದ ಹಿಂದೆ ನಗರದಲ್ಲಿ ಚಿಂದಿ ಹಾಗೂ ಭಿಕ್ಷಾಟನೆ ಮಾಡುತ್ತಾ ಬದುಕು ನಡೆಸುತ್ತಿದ್ದರೆಂದು ತಿಳಿದು ಬಂದಿದೆ.

ಮಾ.11ರಂದು ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಬಂದಿತ್ತು. ಈ ಕಾರಣದಿಂದ ವಿಪರೀತವಾಗಿ ಕುಡಿದಿದ್ದ ಗಂಡ ಸುಮಾಳ ತಲೆಗೆ ಅಲ್ಲಿಯೇ ಬಿದ್ದಿರುವ ಕಲ್ಲಿನಿಂದ ಹೊಡೆದಿದ್ದು, ಪರಿಣಾಮ ತೀವ್ರರಕ್ತಸ್ರಾವದಿಂದ ಒದ್ದಾಡುತ್ತಿದ್ದಳು.

ಆಗ ಅಲ್ಲಿಯೇ ಇದ್ದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಸುಮಾಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಸಾಹಿಲ್ ಬಾಗಲಾ, ಎಸಿಪಿ ಆರ್ ಕೆ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಸಾಹಿಲ್ ಬಾಗಲಾ ಅವರು, ಪ್ರಕರಣ ತನಿಖೆ ಹಂತದಲ್ಲಿದ್ದು, ತನಿಖೆ ನಂತರ ಘಟನೆಯ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.