ಹುಬ್ಬಳ್ಳಿ: ಯುವತಿಯರು ಮದುವೆ ಆದ್ಮೇಲೆ ಶೈಕ್ಷಣಿಕ ಜೀವನದಿಂದ ದೂರ ಉಳಿಯುವುದೇ ಹೆಚ್ಚು. ಆದ್ರೆ ನಗರದ ಮಹಿಳೆವೋರ್ವರು ಹಸುಗೂಸನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷೆ ಬರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ನಗರದ ಸೆಂಟ್ಲಮೆಂಟ್ ದೊಡ್ಡಕೇರಿ ನಿವಾಸಿ ವೈಶಾಲಿ ವೆಂಕಟೇಶ್ ಮೊರಬದ ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯ ನಂತರ ಓದನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರೆಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಮ್ಎ ಕನ್ನಡ ವಿಭಾಗದಲ್ಲಿ ಓದುತ್ತಿರುವ ಇವರು ಅಂತಿಮ ವರ್ಷದ ಪರೀಕ್ಷೆಯನ್ನು ತಮ್ಮ ತಿಂಗಳ ಮಗುವಿನೊಂದಿಗೆ ಹೋಗಿ ಬರೆಯುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಇವರ ಉನ್ನತ ಶಿಕ್ಷಣ ಕಲಿಕೆಗೆ ಕುಟುಂಬಸ್ಥರು ಸಹ ಬೆನ್ನೆಲುಬಾಗಿ ನಿಂತಿದ್ದಾರೆ. ಮದುವೆಯಾದ ನಂತರ ಸಂಸಾರದ ಜಂಜಾಟದಲ್ಲಿ ವೈಶಾಲಿ ಅವರಿಗೆ ಶಿಕ್ಷಣದ ಕೊರತೆಯಾಗದ ರೀತಿಯಲ್ಲಿ ಕುಟುಂಬಸ್ಥರು ನೋಡಿಕೊಳ್ಳುತ್ತಿರುವುದು ಸಂತಸದ ಸಂಗತಿ.