ಧಾರವಾಡ: ನಗರದಲ್ಲಿ ಸೌಂಡ್ ಮಾಡಿಕೊಂಡು ಸುತ್ತಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಸೈಲೆನ್ಸರ್ಗಳ ಮೇಲೆ ರೂಲರ್ ಹತ್ತಿಸಿ ಕರ್ಕಶವಾಗಿ ಸೌಂಡ್ ಮಾಡುವ ಸವಾರರಿಗೆ ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ್ ವಾರ್ನಿಂಗ್ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬೈಕ್ಗಳ ಸೈಲೆನ್ಸರ್ಗಳನ್ನು ರೂಲರ್ನಿಂದ ನಾಶ ಮಾಡಲಾಗಿದೆ. ಬೈಕ್ಗಳ ಸೈಲೆನ್ಸರ್ಗಳನ್ನು ಸಂಚಾರಿ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ರೂಲರ್ ಹತ್ತಿಸಿ ನುಜ್ಜುಗುಜ್ಜು ಮಾಡಲಾಗಿದೆ. 110 ಕ್ಕೂ ಹೆಚ್ಚು ಬೈಕ್ಗಳ ಸುಮಾರು 6 ಲಕ್ಷ ಮೌಲ್ಯದ ಸೈಲೆನ್ಸರ್ಗಳನ್ನು ನಾಶಪಡಿಸಲಾಗಿದೆ.
ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಶ್ರೀಮಂತರ ಮಕ್ಕಳು ಕರ್ಕಶ ಶಬ್ಧ ಮಾಡಿಕೊಂಡು ಬೈಕ್ಗಳನ್ನು ಓಡಿಸುತ್ತಿದ್ದರು. ಹೀಗಾಗಿ ಸೈಲೆನ್ಸರ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಅವುಗಳ ಮೇಲೆ ರೂಲರ್ ಹತ್ತಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.