ETV Bharat / city

ಡ್ರಗ್ಸ್ ಜಾಗೃತಿ : ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹುಬ್ಬಳ್ಳಿ ಹೆಸ್ಕಾಂ ಅಧಿಕಾರಿ ಸೈಕಲ್ ಜಾಥಾ! - Kashmir to Kanyakumari cycle jatha

ದೇಶದಲ್ಲಿ ಹೆಚ್ಚಾಗಿರುವ ಮಾದಕ ದ್ರವ್ಯ, ಗಾಂಜಾ ಸೇವನೆಯ ಶಮನಕ್ಕೆ ಹಾಗೂ ಯುವಕರಿಗೆ ತಿಳಿ ಹೇಳಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ..

cycle jatha
ಸೈಕಲ್ ಜಾಥಾ
author img

By

Published : Dec 22, 2021, 7:38 PM IST

ಹುಬ್ಬಳ್ಳಿ : ಡ್ರಗ್ಸ್ ಹಾಗೂ ಇನ್ನಿತರ ಮಾದಕವಸ್ತು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹುಬ್ಬಳ್ಳಿಯ ಹೆಸ್ಕಾಂ ಇನ್ಸ್‌ಪೆಕ್ಟರ್‌ ಮುರಗೇಶ್​ ಆರ್.ಚನ್ನಣ್ಣವರ್​ ಸೈಕಲ್ ಜಾಥಾ ಮೂಲಕ ಕಾಶ್ಮೀರದಿಂದ ಹುಬ್ಬಳ್ಳಿಗೆ ಬಂದ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಆಟೋ ಚಾಲಕರ ಸಂಘದಿಂದ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸನ್ಮಾನಿಸಿ ಬೀಳ್ಕೋಟ್ಟರು.

ನಂತರ ಮಾತನಾಡಿದ ಹೆಸ್ಕಾಂ ಇನ್ಸ್‌ಪೆಕ್ಟರ್​ ಮುರಗೇಶ್​ ಚನ್ನಣ್ಣವರ್, ದೇಶದಲ್ಲಿ ಹೆಚ್ಚಾಗಿರುವ ಮಾದಕ ದ್ರವ್ಯ, ಗಾಂಜಾ ಸೇವನೆಯ ಶಮನಕ್ಕೆ ಹಾಗೂ ಯುವಕರಿಗೆ ತಿಳಿ ಹೇಳಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಡ್ರಗ್ಸ್ ದಂಧೆ, ಇಬ್ಬರ ಸೆರೆ : 6 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್ ಜಪ್ತಿ

ನನ್ನ ಜೊತೆಗೆ ಸದಾನಂದ, ಪ್ರಶಾಂತ್​ ಸೈಕಲ್ ಜಾಥಾ ಆರಂಭಿಸಿದ್ದಾರೆ. ಇನ್ನೂ 5 ದಿನಗಳಲ್ಲಿ ಸೈಕಲ್ ಜಾಥಾ ಮುಕ್ತಾಯವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪನಗರ ಠಾಣೆ ಇನ್​ಸ್ಪೆಕ್ಟರ್​ ರವಿಚಂದ್ರನ್, ಟ್ರಾಫಿಕ್ ಇನ್ಸ್‌ಪೆಕ್ಟರ್ ಎನ್. ಕಾಡದೇವರಮಠ, ಸಿಬ್ಬಂದಿ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.