ETV Bharat / city

ಈ ಪಾಪಕ್ಕೆ ಕ್ಷಮೆಯುಂಟೇ? ಪತ್ನಿಗೆ ಹಾಲಿನಲ್ಲಿ ವಿಷ ಸೇರಿಸಿ ಭ್ರೂಣ ಹತ್ಯೆ ಮಾಡಿದ ಪಾಪಿ!

author img

By

Published : Jan 31, 2020, 10:58 AM IST

ಪತಿ ಹಾಗೂ ಅತ್ತೆ ಸೇರಿ ಔಷಧಿ ಎಂದು ಗರ್ಭಿಣಿಗೆ ವಿಷ ಕುಡಿಸಿ ಭ್ರೂಣ ಹತ್ಯೆ ಮಾಡಿರುವ ಅಮಾನವೀಯ ಘಟನೆ ಹಳೇ ಹುಬ್ಬಳ್ಳಿಯ ಅಲ್ತಾಫ್ ಫ್ಲಾಟ್​​​ನಲ್ಲಿ ನಡೆದಿದೆ.

ಭ್ರೂಣ ಹತ್ಯೆ
ಭ್ರೂಣ ಹತ್ಯೆ

ಹುಬ್ಬಳ್ಳಿ: ಪತಿ ಹಾಗೂ ಅತ್ತೆ ಸೇರಿ ಔಷಧಿ ಎಂದು ಗರ್ಭಿಣಿಗೆ ವಿಷ ಕುಡಿಸಿ ಭ್ರೂಣ ಹತ್ಯೆ ಮಾಡಿರುವ ಅಮಾನವೀಯ ಘಟನೆ ಹಳೇ ಹುಬ್ಬಳ್ಳಿಯ ಅಲ್ತಾಫ್ ಫ್ಲಾಟ್​​​ನಲ್ಲಿ ನಡೆದಿದೆ.

ಪತಿ, ಇಮಾಮ್​ ಖಾನಜಾದೆ ಹಾಗೂ ಅತ್ತೆ, ಫಾತಿಮಾ ಖಾನಜಾದೆ ಈ ಕೃತ್ಯ ಎಸಗಿದವರು. ಶಹಿನಾ ಹಾಗೂ ಇಮಾಮ್​ ಮದುವೆಯಾಗಿ ವರ್ಷ ಕಳೆದಿತ್ತು. ಮದುವೆ ನಂತರ ಇಮಾಮ್​ ಹಾಗೂ ಅವರ ತಾಯಿ ಶಹಿನಾ ಅವರಿಗೆ ಹಿಂಸೆ ನೀಡುತ್ತಿದ್ದರು. ಜೊತೆಗೆ ಜಗಳವಾಡಿ ಶಹಿನಾ ಅವರನ್ನು ತವರು ಮನೆಗೆ ಕಳುಹಿಸಿದ್ದರು. ನಂತರ ಹಿರಿಯರು ರಾಜಿ ಮಾಡಿಸಿ ಮತ್ತೆ ಮನೆಗೆ ಬಿಟ್ಟಿದ್ದರು ಎಂಬ ಮಾಹಿತಿ ಇದೆ.

ಇದೀಗ ಹಾಲಿನಲ್ಲಿ ವಿಷ ಸೇರಿಸಿ ಶಹಿನಾ ಅವರಿಗೆ ಕುಡಿಸಿದ್ದಾರೆ. ವಿಷ ಸೇವಿಸಿದ ನಂತರ ಆಕೆಗೆ ಹೊಟ್ಟೆ ನೋವು ತೀವ್ರಗೊಂಡ ಹಿನ್ನೆಲೆ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ದುರಾದೃಷ್ಟವಶಾತ್​ ಹೊಟ್ಟೆಯಲ್ಲೇ ಮಗು ಮೃತಪಟ್ಟಿದೆ. ವೈದ್ಯರು ಭ್ರೂಣವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಕಸಬಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.