ಹುಬ್ಬಳ್ಳಿ: ಮೂರು ಸಾವಿರ ಮಠದಲ್ಲಿ ನಡೆಯಲಿರುವ ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳ ಸತ್ಯ ದರ್ಶನ ಸಭೆಗೆ ಮುಂಜಾಗೃತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಮಠದ ಆವರಣದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದ್ದು, 10: 30ಕ್ಕೆ ನೆಹರೂ ಮೈದಾನದಿಂದ ಪಾದಯಾತ್ರೆಯ ಮೂಲಕ ದಿಂಗಾಲೇಶ್ವರ ಶ್ರೀಗಳ ನೇತೃತ್ವದ ಭಕ್ತ ಸಮೂಹ ಮಠದ ಆವರಣ ತಲುಪಿ ಸಭೆ ನಡೆಸಲಿದೆ. ಪರ ವಿರೋಧದ ನಡುವೆಯೂ ಸಭೆ ನಡೆಯುತ್ತಿದ್ದು, ಏನಾಗಲಿದೆ ಎಂಬ ಆತಂಕ ಭಕ್ತ ಸಮೂಹದಲ್ಲಿ ಮೂಡಿದೆ.
ಸಭೆಯಲ್ಲಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ (ಮೂಜಗು) ಸ್ವಾಮೀಜಿ, ಸಂಬಂಧಪಟ್ಟ ಗಣ್ಯರು, ದಿಂಗಾಲೇಶ್ವರ ಸ್ವಾಮಿಗಳ ನೇಮಕವನ್ನು ವಿರೋಧಿಸುವವರು ಸಭೆಯಲ್ಲಿ ಉಪಸ್ಥಿತರಿರುತ್ತಾರೆಯೆ? ಫಲಿತಾಂಶ ಏನಾಗಲಿದೆ? ಎಂಬ ಕುತೂಹಲ ಭಕ್ತರಲ್ಲಿದೆ.
ಸಭೆ ನಡೆದರೆ ದಿಂಗಾಲೇಶ್ವರರು ತಮ್ಮ ನೈತಿಕ ಬಲ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾರೆಯೆ? ಇಲ್ಲವಾದರೆ ಶ್ರೀಗಳ ಮುಂದಿನ ನಡೆ ಎನು ಎಂಬ ಯಕ್ಷ ಪ್ರಶ್ನೆಗಳು ಭಕ್ತರನ್ನು ಆವರಿಸಿದೆ.